ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ನೇಪಾಳದಲ್ಲಿ ಭಾರೀ ಭೂಕುಸಿತ: ಎರಡು ಬಸ್‌ಗಳು ಜಖಂ, 7 ಮಂದಿ ಭಾರತೀಯರು ಸೇರಿ 65 ಪ್ರಯಾಣಿಕರು ನಾಪತ್ತೆ!

ಕಠ್ಮಂಡು: ನೇಪಾಳದ ಹೆದ್ದಾರಿಯಲ್ಲಿ ಭಾರೀ ಕುಸಿತ ಸಂಭವಿಸಿದ್ದು, ಪರಿಣಾಮ ಹೆದ್ದಾರಿಯಲ್ಲಿ ಸಾಗುತ್ತಿದ್ದ ಎರಡು ಬಸ್ ಗಳು ಜಖಂಗೊಂಡು 7 ಭಾರತೀಯರು ಸೇರಿ ಒಟ್ಟು 65 ಮಂದಿ ಪ್ರಯಾಣಿಕರು ನಾಪತ್ತೆಯಾಗಿರುವ ಘಟನೆ ಶುಕ್ರವಾರ ವರದಿಯಾಗಿದೆ.

ಚಿತ್ವಾನ್ ಜಿಲ್ಲೆಯ ನಾರಾಯಣಘಾಟ್-ಮುಗ್ಲಿಂಗ್ ರಸ್ತೆಯ ಸಿಮಲ್ಟಾಲ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಈ ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಎರಡು ಬಸ್ ಗಳು ತ್ರಿಶೂಲಿ ನದಿಯಲ್ಲಿ ಇಬ್ಬರು ಚಾಲಕರು ಸೇರಿ 65 ಮಂದಿ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.

ಬೆಳಗಿನ ಜಾವ 3:30 ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಬಸ್‌ಗಳು ಜಖಂಗೊಡಿವೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ನಾವು ಘಟನಾ ಸ್ಥಳದಲ್ಲಿದ್ದು ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಎಡೆಬಿಡದೆ ಮಳೆ ಸುರಿಯುತ್ತಿದ್ದು, ಇದು ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡುತ್ತಿದೆ ಎಂದು ಚಿತ್ವಾನ್‌ನ ಮುಖ್ಯ ಜಿಲ್ಲಾ ಅಧಿಕಾರಿ ಇಂದ್ರದೇವ್ ಯಾದವ್ ತಿಳಿಸಿದ್ದಾರೆ.

ಕಠ್ಮಂಡುವಿನಿಂದ ರೌತಹತ್‌ನ ಗೌರ್‌ಗೆ ತೆರಳುತ್ತಿದ್ದ ಕಠ್ಮಂಡುವಿನಿಂದ ಹೊರಟಿದ್ದ ಏಂಜೆಲ್ ಬಸ್ ಮತ್ತು ಗಣಪತಿ ಡಿಲಕ್ಸ್ ಬಸ್ ಭೂಕುಸಿತಕ್ಕೆ ಸಿಲುಕಿದೆ ಎಂದು ತಿಳಿದುಬಂದಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಕಠ್ಮಂಡುವಿಗೆ ತೆರಳುತ್ತಿದ್ದ ಬಸ್‌ನಲ್ಲಿ 24 ಜನರಿದ್ದರು. ಮತ್ತೊಂದು ಬಸ್‌ನಲ್ಲಿ 41 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಘಟನೆಗೆ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ತಕ್ಷಣದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿರ್ದೇಶನ ನೀಡಿದ್ದಾರೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಬಸ್‌ನಲ್ಲಿದ್ದ 65 ಪ್ರಯಾಣಿಕರ ಪೈಕಿ ಏಳು ಮಂದಿ ಭಾರತೀಯ ಪ್ರಜೆಗಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.

No Comments

Leave A Comment