ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಪ್ರಕರಣ: ಹಗರಣದ ಆರೋಪಿಗಳ‌ ಮತ್ತೊಂದು ಕಹಾನಿ ಬಯಲು

ಬೆಂಗಳೂರು, ಜು.11: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮ ದಲ್ಲಿ ಆಗಿರುವ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ(SIT) ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಅದರಂತೆ ದಿನಕ್ಕೊಂದು ವಿಚಾರಗಳು ಬೆಳಕಿಗೆ ಬರುತ್ತಲಿದೆ. ಇದೀಗ ಆರೋಪಿಗಳ‌ ಮತ್ತೊಂದು ಕಹಾನಿ ಬಯಲಾಗಿದ್ದು, ಹೈದರಾಬಾದ್ ಫಸ್ಟ್ ಬ್ಯಾಂಕ್​ನಲ್ಲಿ ತೆರೆದಿದ್ದ 18 ನಕಲಿ ಖಾತೆಗಳಿಗೂ ಬೆಂಗಳೂರಿನ ಕನೆಕ್ಷನ್ ಇರುವುದು ತಿಳಿದು ಬಂದಿದೆ.

 

ಉದ್ಯಮಿಗಳ ಹೆಸರಲ್ಲಿ ನಕಲಿ ಖಾತೆ

ಬೆಂಗಳೂರಿನ ಉದ್ಯಮಿಗಳ ಹೆಸರಲ್ಲಿ ಆರೋಪಿಗಳು ನಕಲಿ ಖಾತೆಗಳನ್ನು ತೆರೆದಿದ್ದರು. ಆ ನಕಲಿ ಖಾತೆಗಳ‌ ಮೂಲಕವೇ ಖದೀಮರು ಕೋಟ್ಯಾಂತರ ರೂ. ಹಣ ವರ್ಗಾಯಿಸಿಕೊಂಡಿದ್ದಾರೆ. ಬೆಂಗಳೂರಿನ ರಾಮ್ ಎಂಟರ್ ಪ್ರೈಸೆಸ್(5.7 ಕೋಟಿ ರೂ.), ಜಿ ಎನ್ ಇಂಡಸ್ಟ್ರೀಸ್, (4.42 ಕೋಟಿ ರೂ.), ಸುಜಲಾ ಎಂಟರ್ ಪ್ರೈಸೆಸ್(5.63 ಕೋಟಿ), ನೊವೆಲ್ ಸೆಕ್ಯುರಿಟಿ ಸರ್ವಿಸ್(4 ಕೋಟಿ) ಸೇರಿದಂತೆ 18 ಉದ್ಯಮಿಗಳ‌ ಹೆಸರಲ್ಲಿ‌ ನಕಲಿ ಖಾತೆಗಳು ತೆರೆಯಲಾಗಿದೆ.

ನಕಲಿ ಖಾತೆಗಳಿಗೆ 89 ಕೋಟಿ ಹಣ ವರ್ಗಾವಣೆ

ಹೌದು, ಬೆಂಗಳೂರಿನ ಉದ್ಯಮಿಗಳ ಹೆಸರು, ವಿಳಾಸ ಬಳಸಿ ಫಸ್ಟ್ ಫೈನಾನ್ಸ್ ಬ್ಯಾಂಕ್​ನಲ್ಲಿ‌ ನಕಲಿ ಖಾತೆ ತೆರೆಯಲಾಗಿದೆ. ಬಳಿಕ ಆರೋಪಿಗಳು ಈ ನಕಲಿ ಅಕೌಂಟ್​ಗಳಿಗೆ ಯೂನಿಯನ್ ಬ್ಯಾಂಕ್​ನಿಂದ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಸುಳ್ಳು ದಾಖಲೆಗಳನ್ನ ಸೃಷ್ಟಿಸಿ ತೆರಿದಿದ್ದ 18 ನಕಲಿ ಖಾತೆಗಳಿಗೆ 89 ಕೋಟಿ ಹಣ ವರ್ಗಾವಣೆಯಾಗಿತ್ತು. ಈ ವಿಚಾರ ಗೊತ್ತಾದ ಮೇಲೆ ಉದ್ಯಮಿಗಳು ವಂಚನೆ ಕೇಸ್ ದಾಖಲು ಮಾಡಿದ್ದರು. ಬೆಂಗಳೂರಿನ ಕೆಲ ಪೊಲೀಸ್ ಠಾಣೆಗಳಲ್ಲಿ ಉದ್ಯಮಿಗಳ ದೂರಿನ ಅನ್ವಯ ಎಫ್​ಐಆರ್​ ದಾಖಲಿಸಿದ್ದರು. ಸಧ್ಯ ಈ ಕೇಸ್​ಗಳನ್ನು ವರ್ಗಾವಣೆ ಮಾಡಿಕೊಂಡು ಎಸ್​ಐಟಿ ತನಿಖೆ ನಡೆಸುತ್ತಿದ್ದಾರೆ.

No Comments

Leave A Comment