ಮಹಾರಾಷ್ಟ್ರದ ಪುಣೆ ಬಳಿಯ ಇಂದ್ರಾಯಣಿ ನದಿ ಸೇತುವೆಯೊಂದು ಭಾನುವಾರ ಕುಸಿದು ಬಿದಿದ್ದು, ನಾಲ್ವರು ಪ್ರವಾಸಿಗರು ಮೃತಪಟ್ಟಿರುವುದಾಗಿ ವರದಿಯಾಗಿದೆ......

ಸ್ವಚ್ಛತೆ ಕಾಣದೆ ಡಂಪಿಂಗ್ ಅಡ್ಡೆಯಾದ ಮಣಿಪಾಲದ ನಗರಸಭೆ ಕಟ್ಟಡ

ಉಡುಪಿ ನಗರಸಭೆಯು ಊರೆಲ್ಲಾ ಕಸ ವಿಂಗಡನೆ ವಾಹನದ ಮೂಲಕ. ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ ಮೈಕ್ ಮೂಲಕ ಡಂಗುರ ಸಾರಿ. ಡೆಂಗ್ಯೂ ಮಲೇರಿಯದಂತಹ. ಕಾಯಿಲೆಗಳು ಮಳೆಗಾಲದಲ್ಲಿ ಹರಡುತ್ತದೆ ಎಂದು ಧ್ವನಿವರ್ಧಕದ ಮೂಲಕ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿ. ಜಾಗೃತಿಗೊಳಿಸುವುದು ಸ್ವಾಗತ. ಆದರೆ ನಗರಸಭೆಯ ಸ್ವoತ ಕಟ್ಟಡದ ಮೊದಲ ಮಹಡಿಯಲ್ಲಿ ಸ್ವಚ್ಛತೆ ಕಾಣದೆ ಇಲ್ಲಿ ಊಟ ಮಾಡಿದ ಪ್ಲೇಟು ಇತರ ಹಸಿ ಮತ್ತು ಒಣ ಕಸಗಳು ರಾಶಿಯಾಗಿ ಡಂಪಿಂಗ್ ಆಗಿದೆ. ಶ್ವಾನಗಳು ಕೂಡ ಮೊದಲ ಮಹಡಿಯಲ್ಲಿ ಸಂಚರಿಸುತ್ತದೆ. ಮಳೆಗಾಲಕ್ಕೆ ಕಟ್ಟಡದ ಕಿಟಕಿಗಳಿಂದ ಮಳೆ ನೀರು ಹರಿಯುತ್ತದೆ. ಸೋರುತ್ತದೆ.

ಮಳೆ ನೀರು ಒಳಗೆ ಬರುತ್ತದೆ,ಈ ದೃಶ್ಯ ಕಂಡು ಬಂದಿರುವುದು  ಮಣಿಪಾಲದ ನಗರಸಭೆಯ ಕಟ್ಟಡದ ಮೊದಲ ಮಹಡಿಯಲ್ಲಿ. ಮೇಲ್ಗಡೆ. ಬ್ಯಾಂಕ್ ಇನ್ನಿತರ ಕಚೇರಿಗಳಿದ್ದರೂ. ವ್ಯವಹಾರಿಸಲು ಬಂದವರಿಗೆ ಕಸದ ರಾಶಿ ಸ್ವಾಗತದಂತೆ ಕಾಣಿಸುತ್ತಿದೆ ನಗರಸಭೆಯ ಉಪಕಚೇರಿ ಅಲ್ಲೇ ಕೆಳಗಡೆ ಇದ್ದರು. ಸ್ವಚ್ಛತೆ ಮಾತ್ರ ಮರಿಚಿಕೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ. ಸ್ವಚ್ಛತೆ ಕಾಪಾಡಿ. ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

 

kiniudupi@rediffmail.com

No Comments

Leave A Comment