ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಜೈಲಿನಲ್ಲಿರೋ ದರ್ಶನ್ಗೆ ಒಂದು ನ್ಯಾಯ ಇತರ ಬಂಧಿಗಳಿಗೊಂದು ನ್ಯಾಯ?
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಅವರ ಗೆಳತಿ ಪವಿತ್ರಾ ಗೌಡ ಅವರು ಎ1 ಆರೋಪಿ ಆದರೆ, ದರ್ಶನ್ ಎ2 ಆರೋಪಿ ಆಗಿದ್ದಾರೆ. ಇದರ ಜೊತೆಗೆ ಹಲವರು ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಮಧ್ಯೆ ದರ್ಶನ್ ಅವರಿಗಾಗಿ ಜೈಲಿನ ನಿಯಮಗಳನ್ನು ತೂರಲಾಯಿತೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಕಾರಾಗೃಹ ಕಾಯ್ದೆ 1894 ಸೆಕ್ಷನ್ 56 ಅಡಿಯಲ್ಲಿ ಓರ್ವ ಜೈಲು ಬಂಧಿಯು ವಾರದಲ್ಲಿ ಒಮ್ಮೆ ಸ್ನೇಹಿತರು ಹಾಗೂ ಕುಟುಂಬಸ್ಥರನ್ನ ಭೇಟಿ ಮಾಡಬಹುದು. ಕಾರಾಗೃಹ ಕಾಯ್ದೆ 1894 ಸೆಕ್ಷನ್ 57 ಅಡಿಯಲ್ಲಿ ಜೈಲಿನ ಸೂಪರಿಂಡೆಂಟ್ ವಿಶೇಷ ಹಾಗೂ ಅವಶ್ಯಕ ಸಂದರ್ಭದಲ್ಲಿ ಹೆಚ್ಚಿನ ಬಾರಿ ಭೇಟಿಗೆ ಅವಕಾಶ ನೀಡಬಹುದು. ಕಾರಾಗೃಹ ಕಾಯ್ದೆ 1894 ಸೆಕ್ಷನ್ 58 ಅಡಿಯಲ್ಲಿ ಜೈಲು ಬಂಧಿ ಪತ್ರ ಬರೆಯಲು, ಪತ್ರ ಸ್ವೀಕರಿಸಲು ಅನುಮತಿ ಹೊಂದಿರುತ್ತಾರೆ. ರಜಾ ದಿನಗಳಲ್ಲಿ ಯಾರಿಗೂ ಭೇಟಿಗೆ ಅವಕಾಶ ಇರುವುದಿಲ್ಲ.
ವಾರದಲ್ಲಿ ಎರಡು ದಿನ ಜೈಲು ಬಂಧಿ ತನ್ನ ಸ್ನೇಹಿತರು ಹಾಗೂ ಕುಟುಂಬಸ್ಥರನ್ನ ಭೇಟಿ ಮಾಡಬಹುದು. ಅಲ್ಲದೆ ವಿಡೀಯೋ ಕಾನ್ಪರೆನ್ಸ್ ಮುಖಾಂತರವೂ ಜೈಲು ಬಂಧಿಗಳು ವಾರದಲ್ಲಿ ಎರಡು ಬಾರಿ ಕುಟುಂಬಸ್ಥರು ಅಥವಾ ಸ್ನೇಹಿತರ ಜೊತೆ ಮಾತನಾಡಲು ಅವಕಾಶ ಇದೆ. ಆದರೆ ದರ್ಶನ್ ವಿಚಾರದಲ್ಲಿ ಇದ್ಯಾವುದೂ ಲೆಕ್ಕಕ್ಕೇ ಇಲ್ಲ. ಜೈಲು ಸೇರಿ ಕೆಲವೇ ದಿನಗಳಲ್ಲಿ ಹಲವರ ಭೇಟಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ತಾಯಿ ಮೀನಾ ತೂಗುದೀಪ, ಸೋದರ ದಿನಕರ್, ನಟ ವಿನೋದ್ ಪ್ರಭಾಕರ್, ರಕ್ಷಿತಾ ಪ್ರೇಮ್, ಪ್ರೇಮ್ ಭೇಟಿಗೆ ಅವಕಾಶ ನೀಡಲಾಗಿದೆ.
ದರ್ಶನ್ ಅವರನ್ನು ಭೇಟಿ ಮಾಡಲು ಜೈಲು ಅಧಿಕಾರಿಗಳು ಹೀಗೆ ಅವಕಾಶ ನೀಡುತ್ತಿರುವುದು ಎಷ್ಟು ಸರಿ ಅನ್ನೋದು ಅನೇಕರ ಪ್ರಶ್ನೆ. ದರ್ಶನ್ಗೆ ಒಂದು ನ್ಯಾಯ, ಉಳಿದ ಬಂಧಿಗಳಿಗೆ ಒಂದು ನ್ಯಾಯ ಏಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಸದ್ಯ ಜೈಲು ಅಧಿಕಾರಿಗಳ ನಡೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.