ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಅಗ್ನಿವೀರ ವಿಚಾರಯೆತ್ತಿ ಬಿಜೆಪಿಯನ್ನು ಕಟಕಟೆಯಲ್ಲಿ ನಿಲ್ಲಿಸಿದ ರಾಹುಲ್ ಗಾಂಧಿ – ಎದ್ದು ನಿಂತ ರಕ್ಷಣಾ ಸಚಿವ ರಾಜ್’ನಾಥ್ ಸಿಂಗ್ | ಅಗ್ನಿವೀರ್ ಪಿ.ಎಮ್ ಸ್ಕೀಮ್ ಸೈನ್ಯದ ಬ್ರೈನ್ ಚೈಲ್ಡ್ ಅಲ್ಲ!
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಎನ್.ಡಿ.ಎ ಮೈತ್ರಿಕೂಟವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಗ್ನಿವೀರರು ಹುತಾತ್ಮರಾದಾಗ ಅವರಿಗೆ ಹುತಾತ್ಮ ದರ್ಜೆ ಸಿಗುತ್ತಿಲ್ಲ. ಸೂಕ್ತ ತರಬೇತಿ ಇಲ್ಲದೆ ಚೀನಾದಂತಹ ಪೂರ್ಣ ತರಬೇತಿಗೊಡ ಸೈನಿಕರನ್ನು ಎದುರಿಸಬೇಕಾಗಿತ್ತದೆ.
ಪಂಜಾಬ್ ನಲ್ಲಿ ಅಗ್ನಿವೀರದ ಯೋಧ ಹುತಾತ್ಮರಾದಾಗ ಅವರಿಗೆ ಸೂಕ್ತ ಪರಿಹಾರ ಸಿಗದೆ ಕಣ್ಣೀರು ಹಾಕುತ್ತಿದ್ದಾರೆ. ಅವರಿಗೆ ಪರಿಹಾರ ಸಿಕ್ಕಿಲ್ಲ ಎಂದಾಗ ರಕ್ಷಣಾ ಸಚಿವ ರಾಜ್’ನಾಥ್ ಸಿಂಗ್ ಎದ್ದು ನಿಂತು ಒಂದು ಕೋಟಿ ಪರಿಹಾರ ಕೊಡುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ವಾಸ್ತವಿಕತೆ ಅಗ್ನಿವೀರ್’ಗೆ ತಿಳಿದಿದೆ. ಸೈನಿಕರಿಗೆ ತಿಳಿದಿದೆ. ಈ ಅಗ್ನಿವೀರ ಸ್ಕೀಮ್ ಸೇನೆಯ ಬ್ರೈನ್ ಚೈಲ್ಡ್ ಅಲ್ಲ ಇದು ಮೋದಿಯ ಬ್ರೈನ್ ಚೈಲ್ಡ್ ಎಂದು ಹೇಳಿದರು. ನೋಟ್ ಬಂಧಿಯಂತೆ ಈ ಯೋಜನೆ ರೂಪಿಸಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಅಗ್ನಿವೀರ್ ಸೈನ್ಯದ, ಯೋಧರ, ದೇಶದ ವಿರುದ್ಧವಾಗಿದೆ ಈ ಸ್ಕೀಮ್ ನ್ನು ನಾವು ಬಯಸುವುದಿಲ್ಲ ಎಂದರು. ಮೊದಲ ಬಾರಿಗೆ ದೇಶದ ಇತಿಹಾಸದಲ್ಲಿ ಜನರಿಂದ ರಾಜ್ಯತ್ವ ಕಸಿಯಲಾಗಿದೆ. ಮಣಿಪುರದಲ್ಲಿ ನಾಗರಿಕ ಹಿಂಸಾಚಾರ ನಡೆಯುತ್ತಿದೆ. ಜಮ್ಮು ಕಾಶ್ಮೀರದ ರಾಜ್ಯತ್ವ ಕಸಿಯಲಾಗಿದೆ. ಮಣಿಪುರದ ಕುರಿತು ಇವರು ಮಾತನಾಡುವುದಿಲ್ಲ. ಇವರಿಗೆ ಮಣಿಪುರ ದೇಶದ ಭಾಗವಲ್ಲ. ಇವರು ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಗೃಹ ಸಚಿವ, ಪ್ರಧಾನಿ ಮೋದಿ ಮಾತನಾಡುವುದಿಲ್ಲ.
ಇವತ್ತು ಸಂಸತ್ತಿನಲ್ಲಿ ರಾಹುಲ್ ಗಾಂಧಿ ಕೇಂದ್ರ ಸರಕಾರದ ವೈಫಲ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು ವಿರೋಧ ವ್ಯಕ್ತಪಡಿಸುತ್ತ ಬಿಜೆಪಿ ಸಂಸದರು ರಾಹುಲ್ ಗಾಂಧಿ ನಿದರ್ಶನ ನೀಡುವಾಗ ಸುಮ್ಮನಾಗಿ ಕೇಳುತ್ತಿದ್ದ ದೃಶ್ಯ ಕಂಡು ಬಂತು.