ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಸೇನೆಯ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅಧಿಕಾರ ಸ್ವೀಕಾರ
ನವದೆಹಲಿ: ಜೂ.30.ಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ಮನೋ ಜ್ ಪಾ ಡೆ ಅವರು ನಿವೃತ್ತರಾದ ಹಿನ್ನಲೆ ಇದೀಗ ಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂ ಟ್ ಜನರಲ್ ಉಪೇಂದ್ರ ದ್ವಿವೇ ದಿ ಅವರು ಇಂದು ಅಧಿಕಾರ ವಹಿಸಿಕೊಂಡರು.
ಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಅಪಾರ ಕಾರ್ಯಾಚರಣೆಯ ಅನುಭವ ಹೊಂದಿರುವ ಜನರಲ್ ದ್ವಿವೇದಿ ಅವರು ಸೇನೆಯ ಉಪಮುಖ್ಯಸ್ಥರಾಗಿ ಸೇ ವೆ ಸಲ್ಲಿಸುತ್ತಿದ್ದರು.
ಫೆಬ್ರವರಿ 19ರಂದು ಸೇನಾ ಸಿಬ್ಬಂದಿಯ ಉಪಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಲೆಫ್ಟಿನೆಂಟ್ ಜನರಲ್ ದ್ವಿವೇದಿ ಅವರು 2022-2024ರವರೆಗೆ ಉತ್ತರ ಕಮಾಂಡರ್ ಜನರಲ್ ಆಫೀಸರ್ ಕಮಾಡಿಂಗ್-ಇನ್-ಚೀ ಫ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಜನರಲ್ ಮನೋ ಜ್ ಪಾಂಡೆ ಅವರು ಇಂದು ನಿವೃತ್ತರಾಗಲಿದ್ದು, ಸೇವಾ ಹಿರಿತನ ಆಧರಿಸಿ ದ್ವಿವೇ ದಿ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಜೂನ್ 11ರಂ ದು ರಕ್ಷಣಾ ಸಚಿವಾಲಯ ನೇಮಕಗೊಳಿಸಿತ್ತು.