ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಕೊಲ್ಲೂರು: ಆಕಸ್ಮಿಕವಾಗಿ ಕಾಲು ಜಾರಿ ಮನೆಯ ಬಾವಿಗೆ ಬಿದ್ದು ವಿದ್ಯಾರ್ಥಿಗಳಿಬ್ಬರು ಮೃತ್ಯು
ಕೊಲ್ಲೂರು : ಆಕಸ್ಮಿಕವಾಗಿ ಕಾಲು ಜಾರಿ ಮನೆಯ ಬಾವಿಗೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಪಂಚಾಯತ್ ವ್ಯಾಪ್ತಿಯ ನಂದ್ರೋಳ್ಳಿ ಎಂಬಲ್ಲಿ ಇಂದು ನಡೆದಿದೆ.
ಮೃತರನ್ನು ನಂದ್ರೋಳ್ಳಿ ನಿವಾಸಿ ಶೀಲಾ ಹಾಗೂ ಸತೀಶ್ ಮಡಿವಾಳ ಎಂಬವರ ಮಗ ಧನರಾಜ್ (13) ಹಾಗೂ ಮಗಳು ಛಾಯ (7) ಎಂದು ಗುರುತಿಸಲಾಗಿದೆ.
ಮಕ್ಕಳ ರಕ್ಷಣೆಗೆ ಮುಂದಾದ ತಾಯಿ ಶೀಲಾ ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.