ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಮಂಗಳೂರು: ಭೂ ಮಾಪನ ಇಲಾಖೆಯ ಅಧಿಕಾರಿ ಹಾಗೂ ಇಬ್ಬರು ಸರ್ವೇಯರ್‌ಗಳ ಕಚೇರಿ ಮತ್ತು ಮನೆಗಳಿಗೆ ಲೋಕಾಯುಕ್ತ ಪೊಲೀಸರಿಂದ ತಪಾಸಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಭೂ ಮಾಪನ ಇಲಾಖೆಯ ಅಧಿಕಾರಿ(ಡಿಡಿಎಲ್‌ಆರ್‌) ಮತ್ತು ಇಬ್ಬರು ಸರ್ವೇಯರ್‌ಗಳ ಕಚೇರಿ ಹಾಗೂ ಮನೆಗಳಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸರು ತಪಾಸಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನಗರದ ಡಿಡಿಎಲ್‌ಆರ್‌ ಕಚೇರಿ ಮತ್ತು ದೇರಳಕಟ್ಟೆ ಬಳಿ ಇರುವ ಉಳ್ಳಾಲದ ಸರ್ವೇಯರ್‌ ಕಚೇರಿಯಲ್ಲಿ ತಪಾಸಣೆ ನಡೆಸಲಾಗಿದೆ. ಅಲ್ಲದೆ ಅಧಿಕಾರಿ ಮತ್ತು ಸರ್ವೇಯರ್‌ಗಳಿಗೆ ಸೇರಿದ ಬಂಟ್ವಾಳ, ಸೋಮೇಶ್ವರ, ಮಂಗಳೂರು ನಗರ ಮತ್ತು ಕಾರ್ಕಳದ ಮನೆಗಳಲ್ಲಿಯೂ ಪರಿಶೀಲನೆ ನಡೆಸಲಾಗಿದೆ.

ಲೋಕಾಯುಕ್ತ ಎಸ್‌ಪಿ ನಟರಾಜ್‌ ಅವರ ನೇತೃತ್ವದಲ್ಲಿ ಒಟ್ಟು 6 ತಂಡಗಳು ಕಾರ್ಯಾಚರಣೆ ನಡೆಸಿದ್ದು, ತನಿಖೆ ಮುಂದುವರೆದಿದೆ. ಇಲಾಖೆಯ ಕಚೇರಿಯಲ್ಲಿ ಲಂಚ ಸ್ವೀಕಾರ ನಡೆಯುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಾಹಿತಿ ತಿಳಿಯಲಾಗಿದೆ.

No Comments

Leave A Comment