`````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಓದುಗರಿಗೆ ಮತ್ತು ನಮ್ಮ ಜಾಹೀರಾತುದಾರರಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು``````````````

ಮಂಗಳೂರು: ವಿದ್ಯುತ್ ಪ್ರವಹಿಸಿ ಇಬ್ಬರು ಸಾವು, ಭರ್ತಿಯಾಗಿ ಹರಿದ ಕುಮಾರಧಾರಾ ನದಿ, ಉಡುಪಿ, ಚಿಕ್ಕಮಗಳೂರಲ್ಲೂ ಮಳೆ

ಮಂಗಳೂರು: ಭಾರೀ ಮಳೆಗೆ ಕರಾವಳಿಯ ಉಳ್ಳಾಲ ಬಳಿ ಮನೆ ಕುಸಿದು ನಾಲ್ವರು ಮೃತಪಟ್ಟ ಬೆನ್ನಲ್ಲೇ ಭಾರೀ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದು ವಿದ್ಯುತ್ ಪ್ರವಹಿಸಿ ಇಬ್ಬರು ಬಲಿಯಾದ ದಾರುಣ ಘಟನೆ ಮಂಗಳೂರಿನ ಪಾಂಡೇಶ್ವರ ರೊಸಾರಿಯೋ ಚರ್ಚ್ ಹಿಂಬದಿ ಗುರುವಾರ ಮುಂಜಾನೆ ನಡೆದಿದೆ.

ಮೃತರು ಆಟೋ ಚಾಲಕರಾಗಿದ್ದು ರಾಜು(52) ಮತ್ತು ದೇವರಾಜು (42) ಎಂದು ಗುರುತಿಸಲಾಗಿದೆ. ಇಬ್ಬರೂ ಕೂಡ ಇಲ್ಲಿನ ಬಾಡಿಗೆ ರೂಂನಲ್ಲಿ ವಾಸವಾಗಿದ್ದರು. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಒಬ್ಬ ಆಟೋ ಚಾಲಕ ಆಟೋ ಸ್ವಚ್ಚ ಗೊಳಿಸಲು ರೂಂ ನಿಂದ ಹೊರಬಂದು ಆಟೋ ತೊಳೆಯುವ ವೇಳೆ ಮಳೆಗೆ ತುಂಡಾಗಿ ಬಿದ್ದಿದ್ದ ಬೀದಿ ದೀಪದ ವಿದ್ಯುತ್ ತಂತಿ ತಗುಲಿ ವಿದ್ಯುತ್ ಆಘಾತಕ್ಕೆ ಪ್ರಜ್ಞೆ ತಪ್ಪಿ ಬಿದ್ದರು.

ಮಣ್ಣಿನಡಿ ಸಿಲುಕಿದ ಮಕ್ಕಳ ರಕ್ಷಣೆ: ಜಿಲ್ಲೆಯಾದ್ಯಂತ ಭಾರಿ ಮಳೆಗೆ ಅನೇಕ ಕಡೆ ಧರೆ ಕುಸಿದ ಘಟನೆ ನಡೆಯುತ್ತಿದ್ದು, ಪುತ್ತೂರು ಬನ್ನೂರಿನ ಜೈನರಗುರಿ ಸಮೀಪ ಮಜೀದ್ ಎಂಬುವವರ ಮನೆ ಮೇಲೆ ಧರೆ ಕುಸಿದ ಪರಿಣಾಮ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ ಘಟನೆ ಇಂದು ನಸುಕಿನ ಜಾವ ನಡೆದಿದೆ.

ಬನ್ನೂರು ಜೈನರಗುರಿ ಮಜೀದ್ ಎಂಬವರ ಮನೆಯ ಪಕ್ಕದ ಧರೆಯೊಂದರ ಮಣ್ಣು ಮಳೆಗೆ ಸಡಿಲಗೊಂಡು ಮನೆ ಮೇಲೆ ಕುಸಿದು ಬಿದ್ದಿದೆ. ಮಜೀದ್ ಮತ್ತು ಮನೆ ಮಂದಿ ಮಕ್ಕಳು ಮಲಗಿದ್ದ ಕೊಠಡಿಯ ಮೇಲೆ ಮಣ್ಣು ಕುಸಿದ ಪರಿಣಾಮ ಮನೆಯ ಅರ್ಧ ಭಾಗ ಕುಸಿದಿತ್ತು. ಈ ವೇಳೆ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ್ದರು. ತಕ್ಷಣ ಮನೆಯಲ್ಲಿದ್ದ ಉಳಿದವರು ಮಕ್ಕಳನ್ನು ಮಣ್ಣಿನಡಿಯಿಂದ ಹೊರ ಎಳೆದು ಅಪಾಯವನ್ನು ತಪ್ಪಿಸಿದ್ದಾರೆ.

ಘಟನಾ ಸ್ಥಳಕ್ಕೆ ನಗರಸಭಾ ಸದಸ್ಯ ಪಿ ಜಿ ಜಗನ್ನಿವಾಸ ರಾವ್, ಪೌರಾಯುಕ್ತ ಮಧು ಎಸ್ ಮನೋಹರ್ ಸಹಿತ ನಗರಸಭೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನಗರಸಭೆ ಮತ್ತು ಸ್ಥಳೀಯರು ಮಣ್ಣು ತೆರವು ಕಾರ್ಯ ಮಾಡಿದ್ದಾರೆ.

ಮುಳುಗಿದ ಕುಮಾರಧಾರ ಸ್ನಾನಘಟ್ಟ: ಭಾರಿ ಮಳೆಯಿಂದ ಕುಮಾರಧಾರ ಸ್ನಾನಘಟ್ಟ ಮುಳುಗಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಿದೆ. ಕುಮಾರಧಾರ ನದಿಗಿಳಿಯದಂತೆ ಭಕ್ತಾದಿಗಳಿಗೆ ಸೂಚನೆ‌ ನೀಡಲಾಗಿದೆ.

No Comments

Leave A Comment