ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಹಿಂದೂ ಬಾಲಕನಿಗೆ ಅಮಾನುಷವಾಗಿ ಥಳಿಸಿ, ಬಲವಂತವಾಗಿ ಎಂಜಲನ್ನು ನೆಕ್ಕಿಸಿ ‘ಅಲ್ಲಾಹು ಅಕ್ಬರ್’ ಕೂಗುವಂತೆ ಒತ್ತಾಯ, ವಿಡಿಯೋ!
ಬಿಹಾರದ ಮುಜಾಫರ್‌ಪುರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಆತಂಕಕಾರಿ ವಿಡಿಯೋವೊಂದು ಹರಿದಾಡುತ್ತಿದೆ. ವೀಡಿಯೊದಲ್ಲಿ 15 ವರ್ಷದ ಬಾಲಕನನ್ನು ಬಲವಂತವಾಗಿ ಕೂಡಿ ಹಾಕಿ, ಕ್ರೂರವಾಗಿ ಥಳಿಸಿ ಅವಮಾನಿಸಲಾಗಿದೆ. ಮೋತಿಪುರ್ ಪಟ್ಟಣದ ಬಟ್ರಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಆಘಾತಕಾರಿ ವೀಡಿಯೊದಲ್ಲಿ ಬಾಲಕನೊಬ್ಬನಿಗೆ ‘ಮಿಯಾನ್ ಸಾಹೇಬ್ ಜಿಂದಾಬಾದ್’ ಮತ್ತು ‘ಅಲ್ಲಾ-ಹು-ಅಕ್ಬರ್’ ಎಂದು ಕೂಗುವಂತೆ ಬಲವಂತ ಮಾಡಿರುವುದು ಕಾಣಿಸುತ್ತದೆ. ಅಷ್ಟೇ ಅಲ್ಲದೆ ಬಾಲಕನಿಗೆ ಎಂಜಲನ್ನು ನೆಕ್ಕಲು ಒತ್ತಾಯಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುನ್ನಾ, ಸಾಹಿಲ್ ಹಾಗೂ ಮತ್ತೊಬ್ಬನನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಕೋಣೆಯೊಂದರಲ್ಲಿ ಬಾಲಕನನ್ನು ಕೂಡಿ ಹಾಕಿದ್ದು ಕಿರಾತಕನೊಬ್ಬ ಕೊಲಿನಿಂದ ಥಳಿಸುತ್ತಾನೆ. ಅಲ್ಲದೆ ಮತ್ತೊಬ್ಬ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸುತ್ತಾನೆ. ಅಲ್ಲದೆ ದಾಳಿಕೋರ ಬಾಲಕನಿಗೆ ಪದೇ ಪದೇ ಕಪಾಳಮೋಕ್ಷ ಮಾಡುತ್ತಾನೆ. ತೀವ್ರ ಹಲ್ಲೆಯಿಂದ ಹುಡುಗನ ಕೈ ಮುರಿದಿದೆ ಎಂದು ವರದಿಯಾಗಿದೆ. ಘಟನೆಯ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದಾರೆ.ದಾಳಿಕೋರರನ್ನು ಮೊಹಮ್ಮದ್ ಮುನ್ನಾ ಮತ್ತು ಸಾಹಿಲ್ ಎಂದು ಗುರುತಿಸಲಾಗಿದೆ. ಇಡೀ ಘಟನೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ತನ್ನ ಕೃತ್ಯವನ್ನು ಬಯಲಿಗೆಳೆದಿದ್ದಾನೆ.
ವಿಡಿಯೋದಿಂದಾಗಿ ಗ್ರಾಮದಲ್ಲಿ ಸಾಕಷ್ಟು ಉದ್ವಿಗ್ನತೆ ಉಂಟಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಆಡಳಿತ ಮಂಡಳಿ ಸೆಕ್ಷನ್ 144 ಜಾರಿಗೊಳಿಸಿದೆ. ಈ ಸಂಬಂಧ ಸಂತ್ರಸ್ತೆನ ತಂದೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮೋತಿಪುರ ಪೊಲೀಸ್ ಠಾಣೆ ಪ್ರಭಾರಿ ರಾಜನ್ ಕುಮಾರ್ ಖಚಿತಪಡಿಸಿದ್ದಾರೆ. ಎಫ್‌ಐಆರ್‌ನಲ್ಲಿ ನಾಲ್ವರು ಮತ್ತು ಇಬ್ಬರು ಅಪರಿಚಿತರ ಹೆಸರುಗಳನ್ನು ದಾಖಲಿಸಲಾಗಿದೆ. ಮೂವರನ್ನು ಬಂಧಿಸಲಾಗಿದ್ದು, ಇತರರು ತಲೆಮರೆಸಿಕೊಂಡಿದ್ದಾರೆ.