ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಬೆಂಗಳೂರಿನಲ್ಲಿ ನೂರರ ಗಡಿ ದಾಟಿದ ಟೊಮೆಟೊ ಬೆಲೆ, ಇನ್ನು 3ತಿಂಗಳಲ್ಲಿ ಈರುಳ್ಳಿ ಬೆಲೆಯೂ ಏರಿಕೆ

ಬೆಂಗಳೂರು, ಜೂನ್ 20: ಬೆಂಗಳೂರು  ನಗರದಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ತರಕಾರಿ ಬೆಲೆ ಕಳೆದ ಕೆಲವು ದಿನಗಳಿಂದ ಗಗನಕ್ಕೇರಿದೆ. ಈ ಮಧ್ಯೆ, ಇದೀಗ ಟೊಮೆಟೊ  ಹಾಗೂ ಹೂವಿನ ಬೆಲೆ ಪ್ರತಿದಿನ ದುಬಾರಿಯಾಗುತ್ತಿದೆ. ಸದ್ಯ ಒಂದು ಕೆಜಿ ಟೊಮೆಟೊ ಬೆಲೆ (Tomato Price) ನೂರು ರೂಪಾಯಿ ದಾಟಿದೆ. ಈ ವರ್ಷದ ಬೇಸಿಗೆಯಿಂದ ಬೆಂಗಳೂರಿಗೆ ಆದ ಪರಿಣಾಮಗಳು ಒಂದೆರಡಲ್ಲ. ಒಂದು ಕಡೆ ನೀರಿಲ್ಲದೇ ಪರದಾಡುವಂತಾಗಿದ್ದರೆ, ಮತ್ತೊಂದೆಡೆ, ಮಳೆ ಇಲ್ಲದೆ ಎಷ್ಟೋ ಬೆಳೆಗಳು ಹಾಳಾಗಿದ್ದು ಕೂಡ ನಗರದ ಮೇಲೆ ಪರಿಣಾಮ ಬೀರಿತ್ತು. ಈ ವರ್ಷ ಟೊಮೆಟೊ ಬೆಳೆಯುವುದಕ್ಕೆ ಹೋದವರು ಕೂಡ ಕೈ ಸುಟ್ಟುಕೊಂಡಿದ್ದರು. ಇದೀಗ ಮಳೆ ಆರಂಭವಾಗಿದ್ದು, ಟೊಮೆಟೊ ಬೆಳೆಯಲಾಗುತ್ತಿದೆ. ಆದರೆ ಮಳೆ ಸರಿಯಾದ ಸಮಯಕ್ಕೆ ಬರದ ಪರಿಣಾಮ ಬೆಳೆ ಸರಿಯಾಗಿ ಬಂದಿಲ್ಲ. ಹೀಗಾಗಿ ಕರ್ನಾಟಕದಿಂದ ಬರುತ್ತಿದ್ದ ಟೊಮೆಟೊ ಬೆಳೆ ಕಡಿಮೆಯಾಗಿದ್ದು, ಸದ್ಯ ನಾಸಿಕ್​ನಿಂದ ತರಿಸಲಾಗುತ್ತಿದೆ. ಇನ್ನು ಒಂದು ತಿಂಗಳ ಕಾಲ ಟೊಮೆಟೊ ಬೆಲೆ‌ ಇದೇ ರೀತಿಯಾಗಿ ಮುಂದುವರಿಯಲಿದೆ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಟೊಮೆಟೊ ಬೆಲೆ ಏರಿಕೆಗೆ ಕಾರಣ ಏನು?

ಈ ಹಿಂದೆ ಕೋಲಾರ, ಹೊಸಕೋಟೆ, ನಾಸಿಕ್, ಮಹಾರಾಷ್ಟ್ರ, ತಮಿಳುನಾಡು ಭಾಗದಿಂದ ಟೊಮೆಟೊ ಬರುತ್ತಿತ್ತಂತೆ. ಆದರೆ ಈಗ ನಾಸಿಕ್ ಬಿಟ್ಟರೆ ಬೇರೆ ಯಾವ ಭಾಗದಿಂದಲೂ ಬರುತ್ತಿಲ್ಲ. ಜೊತೆಗೆ ಟೊಮೆಟೊಗೆ ಸದ್ಯ ಬೇಡಿಕೆ ಜಾಸ್ತಿ ಇದೆ. ಬೇಡಿಕೆಗೆ ಸರಿಯಾಗಿ ಪೂರೈಕೆಯಾಗದ ಪರಿಣಾಮ ಬೆಲೆ ಜಾಸ್ತಿಯಾಗುತ್ತಿದೆ. ಇನ್ನು ಒಂದು ತಿಂಗಳುಗಳ‌ ಕಾಲ ಟೊಮೆಟೊ ಬೆಲೆ ಹೀಗೆ ಮುಂದುವರಿಯುವ ಸಾಧ್ಯತೆ ಇದೆ. ಇನ್ನು ಟೊಮೆಟೊ ಬೆಲೆ ಏರಿಕೆಗೆ ಕೀಟಗಳ ಸಮಸ್ಯೆ, ಬೆಂಕಿ ರೋಗದ ಸಮಸ್ಯೆಯೂ ಕಾರಣವಾಗುತ್ತಿದೆ. ಉತ್ತಮ ಇಳುವರಿಯೂ ಈ ಬಾರಿ ಇಲ್ಲವಾಗಿದೆ.

ಬೆಂಗಳೂರಿನಲ್ಲಿ ಟೊಮೆಟೊ ಬೆಲೆ

ಬೆಂಗಳೂರಿನಲ್ಲಿ ಸದ್ಯ ಒಂದು ಕೆಜಿ ಟೊಮೆಟೊ ಬೆಲೆ‌ 105 ರೂಪಾಯಿ ಇದ್ದು, ಇನ್ನು ಒಂದು ವಾರದಲ್ಲಿ 150 ರ ಗಡಿದಾಟುವ ಸಾಧ್ಯಾತೆ ಇದೆ.‌ ಮಾರುಕಟ್ಟೆಗಳಲ್ಲಿ 100 ರೂ. ಇದ್ರೆ , ಹಾಪ್ ಕಾಮ್ಸ್​ಗಳಲ್ಲಿ 105 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ.

ಗಗನಕ್ಕೇರಿದ ಹೂವಿನ ಬೆಲೆ

ಹೂಗಳ ಬೆಲೆಯೂ ಏರಿಕೆಯಾಗಿದೆ. ಕೆಜಿ ಸೇವಂತಿಗೆ ಹೂವಿಗೆ ಬರೋಬ್ಬರಿ 400 ರೂ ರೂಪಾಯಿ ಇದ್ದರೆ, ಮಲ್ಲಿಗೆ ಕೆಜೆಗೆ 600, ಮಳ್ಳೆ 400, ಕಾಕಡ‌ 600, ಕನಕಾಬಂರ 500 ಇದೆ. ಯಾವುದೇ ಹಬ್ಬಗಳ ಸೀಸನ್‌ ಅಲ್ಲದೇ ‌ಹೋದರೂ ಹೂಗಳ ಬೆಲೆ ಏರಿಕೆಯಾಗಿದೆ.

No Comments

Leave A Comment