ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಸಿರಿಲ್ ರಾಮಫೋಸಾ ಮರು ಆಯ್ಕೆ
ಆಪ್ರಿಕಾ, ಜೂ 15 :7ನೇ ಸಂಸತ್ತಿನ ರಾಷ್ಟ್ರೀಯ ಅಸೆಂಬ್ಲಿಯ ಮೊದಲ ಅಧಿವೇಶನದಲ್ಲಿ ಶುಕ್ರವಾರದಂದು ದಕ್ಷಿಣ ಆಫ್ರಿಕಾದ ಸಂಸತ್ತು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರನ್ನು ಅಧ್ಯಕ್ಷರಾಗಿ ಮರು ಆಯ್ಕೆ ಮಾಡಿತು.
ಎರಡು ವಾರಗಳ ಹಿಂದೆ ನಡೆದ ಚುನಾವಣೆಯಲ್ಲಿ ಎಎನ್‌ಸಿ ತನ್ನ 30 ವರ್ಷಗಳ ಬಹುಮತವನ್ನು ಕಳೆದುಕೊಂಡ ನಂತರ ಸಮ್ಮಿಶ್ರ ಸರ್ಕಾರವನ್ನು ರಚಿಸ ಮುಂದೆಬಂದಿತ್ತು. ಈ ವೇಳೆ ಉಂಟಾದ ರಾಜಕೀಯ ಬಿಕ್ಕಟ್ಟನ್ನು ಕೊನೆಗೊಳಿಸಲು ಡೆಮಾಕ್ರಟಿಕ್ ಅಲೈಯನ್ಸ್ ANC ಜೊತೆ ಒಪ್ಪಂದ ಮಾಡಿಕೊಂಡಿತ್ತು, ಈ ವೇಳೆ ಎರಡನೇ ಅವಧಿಗೆ ಸಂಸತ್ತಿನಲ್ಲಿ ಮರು ಅವಧಿಗೆ ಸಿರಿಲ್ ರಾಮಾಫೋಸಾ ಅವರನ್ನೇ ಮುಂದುವರಿಸಲು ನಿರ್ಧರಿಸಲಾಗಿತ್ತು.
ಇನ್ನೊಂದೆಡೆ X ನಲ್ಲಿನ ಪೋಸ್ಟ್‌ನಲ್ಲಿ, ದಕ್ಷಿಣ ಆಫ್ರಿಕಾದ ಆಡಳಿತ ಪಕ್ಷವಾದ ANC, ರಾಮಫೋಸಾ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ ಎಂದು ಬಹಿರಂಗಪಡಿಸಿದೆ.
ಕೇಪ್ ಟೌನ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಡೆಮಾಕ್ರಟಿಕ್ ಸಂಸತ್ತಿನ ರಾಷ್ಟ್ರೀಯ ಅಸೆಂಬ್ಲಿಯ ಮೊದಲ ಅಧಿವೇಶನದಲ್ಲಿ ಗೌರವಾನ್ವಿತ ಮಾಟಮೆಲಾ ಸಿರಿಲ್ ರಾಮಾಫೋಸಾ ಅವರು ದಕ್ಷಿಣ ಆಫ್ರಿಕಾದ ಗಣರಾಜ್ಯದ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ” ಎಂದು ANC X ನಲ್ಲಿ ತಿಳಿಸಿದೆ.