ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್ ‘ನಾಪತ್ತೆ’.. ಡಿ ಗ್ಯಾಂಗ್‌ ಸುತ್ತ ಅನುಮಾನದ ಹುತ್ತ

ಬೆಂಗಳೂರು: 2018ರಲ್ಲಿ ಹಣದ ವಂಚನೆ ಪ್ರಕಣದಲ್ಲಿ ದರ್ಶನ್‌ ಬಳಿಕ ಕೆಲಸದ ಮಾಡುತ್ತಿದ್ದ ಮಲ್ಲಿಕಾರ್ಜುನ್‌ 7 ವರ್ಷಗಳಿಂದ ನಾಪತ್ತೆಯಾಗಿದ್ದು, ಈಗ ಆತ ಜೀವಂತವಾಗಿ ಇರುವ ಬಗ್ಗೆಯೇ ಅನುಮಾನ ಮೂಡಿಸಿದೆ ಎನ್ನಲಾಗಿದೆ. ದರ್ಶನ್ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ ಅವರು ದರ್ಶನ್ ಹೆಸರು ಹೇಳಿ ಹತ್ತಾರು ಕೋಟಿ ಸಾಲ ಪಡೆದು ಉಂಡೆನಾಮ ಹಾಕಿದ್ದ ಎನ್ನಲಾಗಿದೆ.

ಪ್ರೇಮ ಬರಹ ಸಿನಿಮಾದ ವಿರತಣಾ ಜವಾಬ್ದಾರಿಯನ್ನು ತೂಗುದೀಪಾ ಪ್ರೊಡಕ್ಷನ್ಸ್​ಗೆ ನೀಡಲಾಗಿತ್ತು. ಅದರ ಸಂ ಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದು ಮಲ್ಲಿಕಾರ್ಜುನ್​ ಅವರೇ. ಸಿನಿಮಾ ಹಕ್ಕು ವಿತರಿಸಿ, ಹಣ ಬಂದ ನಂತರ ಮಲ್ಲಿಕಾರ್ಜುನ್​ ಹಣ ತೆಗೆದುಕೊಂಡು ಪರಾರಿಯಾಗಿದ್ದ. ಸುಮಾರು 7 ವರ್ಷಗಳ ಹಿಂದಿನ ನಾಪತ್ತೆಯಾಗಿದ್ದ ಮಲ್ಲಿಕಾರ್ಜುನ್ ಇದೂವರೆಗೂ ದರ್ಶನ್ ಕೈಗೆ ಸಿಕ್ಕಿಲ್ಲ ಎನ್ನಲಾಗಿದೆ. ಮಲ್ಲಿಕಾರ್ಜುನ್ ಎಲ್ಲಿದ್ದಾನೆ? ಯಾವ ಊರಲ್ಲಿ ಇದ್ದಾನೆ? ಯಾವ ದೇಶದಲ್ಲಿದ್ದಾನೆ? ಇದ್ಯಾವ ಸುಳಿವು ಇದೂವರೆಗೂ ಯಾರಿಗೂ ಗೊತ್ತಿಲ್ಲ ಎನ್ನಲಾಗಿದ್ದು, ಸದ್ಯ ರೇಣುಕಸ್ವಾಮಿ ಪ್ರಕರಣ ಹೊರ ಬಂದ ಬಳಿಕ ಈತನ ಬಗ್ಗೆ ಕೂಡ ಅನುಮಾನ ಶುರುವಾಗಿದೆ.

No Comments

Leave A Comment