ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ರಷ್ಯಾದ ನದಿಯಲ್ಲಿ ಮುಳುಗಿದ ಭಾರತದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

ಮುಂಬೈ , ಜೂ. 07: ರಷ್ಯಾದ ನದಿಯಲ್ಲಿ ಮುಳುಗಿ ಮೃತಪಟ್ಟ ಭಾರತದ ನಾಲ್ವರು ವಿದ್ಯಾರ್ಥಿಗಳಲ್ಲಿ ಒಬ್ಬ ಸಾಯುವ ಹೊತ್ತಿನಲ್ಲಿ ಮನೆಯವರಿಗೆ ವಿಡಿಯೊ ಕರೆ ಮಾಡಿದ್ದ ಎಂದು ವರದಿಯಾಗಿದೆ.

ರಷ್ಯಾದ ವಿಲಿಕಿ ನವ್‌ಗೊರೊಡ್‌ನಲ್ಲಿರುವ ನವ್‌ಗೊರೊಡ್‌ ಸ್ಟೇಟ್‌ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ಹರ್ಷಲ್ ಅನಂತ್‌ರಾವ್‌ ದೆಸಾಲೆ, ಜಿಶಾನ್ ಅಷ್ಪಕ್ ಪಿಂಜಾರಿ, ಜಿಯಾ ಫಿರೋಜ್ ಪಿಂಜಾರಿ ಮತ್ತು ಮಲಿಕ್ ಗುಲಾಮ್‌ಗೌಸ್‌ ಮೊಹಮ್ಮದ್‌ ಯಾಕುಬ್‌ ಅವರು ಸೇಂಟ್ ಪೀಟರ್ಸ್‌ ಬರ್ಗ್‌ ಸಮೀಪದ ವೊಲ್ಖೊವ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ದ್ಯಾರ್ಥಿನಿ ನಿಶಾ ಭೂಪೇ ಶ್ ಸೋನವಾನೆ ಎಂಬವರನ್ನು ರಕ್ಷಿಸಲಾಗಿದೆ. ಅವರಿಗೆ ಚಿಕಿತ್ಸೆ ನೀ ಡಲಾಗುತ್ತಿದೆ ಎಂ ದು ಭಾರತೀ ಯ ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಒಬ್ಬ ವಿದ್ಯಾರ್ಥಿಯ ಶವವನ್ನು ಹೊರ ತೆಗೆಯಲಾಗಿದೆ. ಉಳಿದ ಮೂವರ ದೇಹಗಳ ಹುಡುಕಾಟ ಮುಂದುವರಿದಿದೆ. ಶವಗಳನ್ನು ಭಾರತಕ್ಕೆ ತರಲಾಗುವುದು ಎಂದು ಜಲಗಾಂವ್ ಜಿಲ್ಲಾಧಿಕಾರಿ ಆಯುಷ್ ಪ್ರಸಾದ್ ಅವರು ತಿಳಿಸಿದ್ದಾರೆ.

No Comments

Leave A Comment