ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಟೋಲ್ ಆಪರೇಟರ್ ಮೇಲೆಯೇ ಹರಿದ ಕ್ಯಾಂಟರ್; ಶುಲ್ಕ ಕಟ್ಟದ ಲಾರಿ ತಡೆಯಲು ಹೋಗಿ ಸಾವು

ಬೆಂಗಳೂರು ಗ್ರಾಮಾಂತರ, ಜೂ.01: ಆತ ಪಿಯುಸಿ ಮುಗಿಸಿ, ವಿದ್ಯಾಭ್ಯಾಸವನ್ನು ಅರ್ಧಕ್ಕೆ‌ ನಿಲ್ಲಿಸಿದ್ದ. ಆದರೆ, ಸಂಸಾರ ಜವಾಬ್ದಾರಿ ಹೆಗಲ ಮೇಲೆ ಹಾಕಿಕೊಂಡು ಟೋಲ್​ನಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ವಿಧಿ ಅವನ ಬಾಳಲ್ಲಿ ಆಟವಾಡಿದ್ದು, ತಾನು ಕೆಲಸ ಮಾಡುತ್ತಿದ್ದ ಜಾಗದಲ್ಲೇ ತನ್ನ ಪ್ರಾಣ ಕಳೆದುಕೊಂಡು ಇಹಲೋಕ ತ್ಯಜಿಸಿದ್ದಾನೆ.‌ ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯಲ್ಲಿರುವ ನವಯುಗ ಟೋಲ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್(25) ಎಂಬಾತ, ಟೋಲ್‌ನಲ್ಲಿ ಶುಲ್ಕ ಕಟ್ಟದೆ ಹೋಗುತ್ತಿದ್ದ ಕ್ಯಾಂಟರ್‌ ತಡೆಯಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

ನಾಗರಾಜ್​​ ಮೇಲೆ ಲಾರಿ ಹತ್ತಿಸಿ ಪರಾರಿ

ಟೋಲ್‌‌ ಆಪರೇಟರ್ ಆಗಿದ್ದ ನಾಗರಾಜ್, ನಿನ್ನೆ(ಮೇ.31) ರಾತ್ರಿ ಎಂದಿನಂತೆ ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದ. ಅದರಂತೆ  ಟೋಲ್‌ನಲ್ಲಿ ಶುಲ್ಕ ಕಟ್ಟದೆ ಹೋಗುತ್ತಿದ್ದ ಲಾರಿಯನ್ನ ತಡೆಯಲು ಮುಂದಾಗಿದ್ದ. ಈ ವೇಳೆ ಹಿಂಬದಿಯಿಂದ ಬಂದ ಕ್ಯಾಂಟರ್ ಚಾಲಕ, ಅಜಾಗರೂಕತೆಯಿಂದ ಲಾರಿಯನ್ನು ನಾಗರಾಜ್​ ಮೇಲೆ ಹತ್ತಿಸಿ ಪರಾರಿಯಾಗಿದ್ದಾನೆ. ನಾಗರಾಜು ರಸ್ತೆಯಲ್ಲಿಯೇ ಸಾವು- ಬದುಕಿನ ನಡುವೆ ಹೋರಾಟ ನಡೆಸಿ ಬಳಿಕ ಸಾವನ್ನಪ್ಪಿದ್ದಾನೆ.

No Comments

Leave A Comment