ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಹಷ್‌ ಮನಿ ಕೇಸ್‌: ಅಮೇರಿಕಾದ ಮಾಜಿ ಅಧ್ಯಕ್ಷ ಟ್ರಂಪ್‌ ದೋಷಿ – ಕೋರ್ಟ್‌‌ನಿಂದ ತೀರ್ಪು

ನ್ಯೂಯಾರ್ಕ್‌, ಮೇ.31: ಹಷ್‌ ಮನಿ ಕೇಸ್‌ಗೆ ಸಂಬಂಧಪಟ್ಟಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ದೋಷಿ ಎಂದು ನ್ಯೂಯಾರ್ಕ್‌ ನ ಕೋರ್ಟ್‌ ತೀರ್ಪುನೀಡಿದೆ. ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾದ ಮೊದಲ ಯುಎಸ್‌ ಮಾಜಿ ಅಧ್ಯಕ್ಷ ಎನ್ನಲಾಗಿದೆ.

ಪ್ರಕರಣದಲ್ಲಿ ಎಲ್ಲಾ 34 ಆರೋಪಗಳಲ್ಲಿಯೂ ಟ್ರಂಪ್‌ ದೋಷಿ ಎಂದು ನ್ಯೂಯಾರ್ಕ್‌ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಜಾಮೀನು ಇಲ್ಲದೇ ಬಿಡುಗಡೆಯಾಗಿದ್ದ ಟ್ರಂಪ್‌ ಈಗ ಅಪರಾಧಿ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಹತ್ತಿರದಲ್ಲಿರುವ ವೇಳೆ ರಿಪಬ್ಲಿಕನ್‌ ಪಕ್ಷದ ನಾಯಕ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಏರಬಹುದು ಎಂದು ಸುದ್ದಿಯಾಗಿತ್ತು. ಈ ಮಧ್ಯೆ ಪ್ರಕರಣವೊಂದರಲ್ಲಿ ದೋಷಿಯಾಗಿದ್ದಾರೆ. ಇನ್ನು ಈಕುರಿತು ಟ್ರಂಪ್‌ ಪ್ರತಿಕ್ರಿಯಿಸಿದ್ದು, ನಾನು ತುಂಬಾ ಮುಗ್ಧ ಮನುಷ್ಯ. ನಿಜವಾದ ತೀರ್ಪು ಮತದಾರರಿಂದ ಬರಲಿದೆ.

ಇದೀಗ ಟ್ರಂಪ್‌ ಅವರು ನಟಿ ಸ್ಟಾರ್ಮಿ ಡೇನಿಯಲ್ಸ್‌ಗೆ ಹಣ ಪಾವತಿಸಿದ ಆರೋಪಕ್ಕೆ ಸಂಬಂಧಿಸಿ ‘ಹಷ್‌ ಮನಿ’ ಪ್ರಕರಣದಲ್ಲಿ ಕಾನೂನು ಸಂಕಷ್ಟ ಎದುರಿಸುತ್ತಿದ್ದರು. ಗೌಪ್ಯತೆ ಕಾಪಾಡಲು ನೀಡಿದ ಹಣಕ್ಕೆ ಹಷ್‌ ಮನಿ ಎನ್ನಲಾಗುತ್ತದೆ.

ಸ್ಟಾರ್ಮಿ ಜೊತೆಗೆ 2006 ರಲ್ಲಿ ಟ್ರಂಪ್‌ ಲೈಂಗಿಕ ಸಂಬಂಧ ಹೊಂದಿದ್ದರು. ಈ ಸಂಬಂಧ ಹೊರ ಬರದಂತೆ ಸ್ಟಾರ್ಮಿ ಅವರಿಗೆ ಟ್ರಂಪ್‌ ತಮ್ಮ ವಕೀಲರ ಮೂಲಕ ಹಣ ನೀಡಿದ್ದರು ಎಂಬ ಆರೋಪ ಇತ್ತು. ಈ ಸಂಬಂಧ ವಿಚಾರಣೆಯನ್ನು ಮಾಜಿ ಅಧ್ಯಕ್ಷ ಎದುರಿಸುತ್ತಿದ್ದರು.

No Comments

Leave A Comment