ಹರಿಯಾಣ, ಗೋವಾ, ಲಡಾಖ್‌ಗೆ ಹೊಸ ರಾಜ್ಯಪಾಲರ ನೇಮಕ....Poster ಅಂಟಿಸುವ ಮುನ್ನ ಎಚ್ಚರ; Bengaluru Auto Driversಗೆ ಮತ್ತೆ ಶಾಕ್ ಕೊಟ್ಟ RTO ಅಧಿಕಾರಿಗಳು! 5 ಸಾವಿರ ದಂಡ!

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹತ್ತಕ್ಕೂ ಅಧಿಕ ವಾಹನಗಳಿಗೆ ಡಿಕ್ಕಿ

ಪುತ್ತೂರು:ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹತ್ತಕ್ಕೂ ಅಧಿಕ ವಾಹನಗಳಿಗೆ ಡಿಕ್ಕಿ ಹೊಡೆದು ಹಾನಿ ಉಂಟಾದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಟ್ಯಾರಿನಲ್ಲಿ ಸಂಭವಿಸಿದೆ.

ಪಾಣಾಜೆ ಕಡೆಯಿಂದ ವೇಗವಾಗಿ ಬಂದ ಕಾರು ಸಂಟ್ಯಾರು ಜಂಕ್ಷನ್‌ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದಿದೆ.

ಪಾಣಾಜೆ ಸಹಿತ ಬೇರೆ ಬೇರೆ ಭಾಗದಿಂದ ಖಾಸಗಿ ವಾಹನಗಳಲ್ಲಿ ಬರುವವರು ಸಂಟ್ಯಾರ್‌ಬಳಿ ವಾಹನ ನಿಲ್ಲಿಸಿ ಬಸ್‌ನಲ್ಲಿ ಪುತ್ತೂರು, ಕುಂಬ್ರಕ್ಕೆ ತೆರಳುತ್ತಾರೆ. ಅವರ ವಾಹನಗಳಿಗೆ  ಕಾರು ಢಿಕ್ಕಿ ಹೊಡೆದಿದೆ. ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment