ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಹಿರಿಯ ಟೂರಿಸ್ಟ್ ಬಸ್ ಏಜೆಂಟ್ ಸ್ಟ್ಯಾನ್ಲಿ ಸುಧಾಕರ್ ಸಾಲಿನ್ಸ್ ನಿಧನ

ಉಡುಪಿ: ಟೂರಿಸ್ಟ್ ಬಸ್ ಏಜೆಂಟಾಗಿ ಕಾರ್ಯ ನಿರ್ವಹಿಸುತ್ತಿದ್ದ  ಹಿರಿಯ ಬಸ್ ಏಜೆಂಟ್ ಸ್ನೇಹ ಜೀವಿ ಸ್ಟ್ಯಾನ್ಲಿ   ಸುಧಾಕರ್ ಸಾಲಿನ್ಸ್ (53)  ನಿಧನರಾಗಿದ್ದಾರೆ.

ಕಳೆದ  ಐದು ದಿನಗಳ ಹಿಂದೆ  ಧೀಢೀರಾಗಿ ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿ ಮಣಿಪಾಲ ಅಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿತ್ತು. ಬಳಿಕ ಅಜ್ಜರಕಾಡು ಅಸ್ಪತ್ರೆಯಲ್ಲಿ  ಜೀವಣ್ಮರಣ ಹೋರಾಟದಲ್ಲಿ ದ್ದ ಸುಧಾಕರ್ ಚಿಕಿತ್ಸೆಗೆ ಸ್ಪಂದಿಸದೇ ರವಿವಾರ ಮುಂಜಾನೆ ದೈವಧೀನರಾದರು.

ಕಳೆದ 35 ವರ್ಷಗಳಿಂದ ಉಡುಪಿಯಲ್ಲಿ ಟೂರಿಸ್ಟ್ ಏಜೆಂಟಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.ಎಲ್ಲರೊಂದಿಗೂ  ನಗುತ್ತಾ ಬೆರೆತು ಬಾಳುವ ಸ್ವಭಾವ ಹೊಂದಿದ್ದ  ಅವರು ಸ್ನೇಹ ಜೀವಿಯಾಗಿದ್ದರು.ಪತ್ನಿ ಹಾಗೂ ಒಂದು ಗಂಡು ಮಗ ಹಾಗೂ ಹೆಣ್ಣು ಮಗಳು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ಸೋಮವಾರದಂದು ಉಚ್ಚಿಲದ  ಸುಭಾಸ್ ರೋಡ್ ನಲ್ಲಿರುವ ಸ್ವಗೃಹದಲ್ಲಿ ವಿಧಿವಿಧಾನಗಳು ನಡೆಯಲಿದೆ.

No Comments

Leave A Comment