ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ವಿಚಾರಣೆಗೆಂದು ಕರೆತಂದಾಗ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ-ಚನ್ನಗಿರಿ ಪೊಲೀಸ್ ಠಾಣೆಯ ಮೇಲೆ ಉದ್ರಿಕ್ತ ಗುಂಪಿನ ದಾಳಿ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ಪ್ರಟ್ಟಣದಲ್ಲಿ ನಿನ್ನೆ ಲಾಕಪ್ ಡೆತ್ (lock up death) ಸಂಭವಿಸಿದೆ ಎಂಬ ಆರೋಪ ಕೇಳಿಬರುತ್ತಿದೆ. ನಿನ್ನೆ ವ್ಯಕ್ತಿಯೊಬ್ಬನನ್ನು ವಿಚಾರಣೆಗೆಂದು ಪೊಲೀಸರು ಇಲ್ಲಿ ಕಾಣುತ್ತಿರುವ ಪೊಲೀಸ್ ಠಾಣೆಗೆ ಕರೆತಂದಾಗ ಅವನು ಕುಸಿದುಬಿದ್ದು ಸಾವನ್ನಪ್ಪಿದ್ದಾನೆ.

ಪೊಲೀಸರು ಬಂಧಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಕಾರಣ ಅವನು ಸತ್ತಿದ್ದಾನೆ ಎಂದು ಅರೋಪಿಸಿ ಸುಮಾರು ನೂರು ಜನ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಟಿವಿ9 ದಾವಣೆಗೆರೆ ವರದಿಗಾರ ಘಟನೆಯ ಸಂಪೂರ್ಣ ಚಿತ್ರಣ ನೀಡಿದ್ದಾರೆ. ಈ ಪೊಲೀಸ್ ಠಾಣೆ ಪಕ್ಕದಲ್ಲೇ ಡಿವೈಎಸ್​​ಪಿ ಕಚೇರಿ ಇದ್ದು ಆವರಣದಲ್ಲಿದ್ದ ಪೊಲೀಸ್ ವಾಹನಗಳನ್ನು ಉದ್ರಿಕ್ತ ಗುಂಪು ಜಖಂಗೊಳಿಸಿದೆ.

ಠಾಣೆಯ ಮೇಲೆ ಕಲ್ಲು ತೂರಾಟ ನಡೆದಿದ್ದು ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಆವರಣದಲ್ಲಿದ್ದ ದ್ವಿಚಕ್ರವಾಹನ, ಎಸಿ ಮತ್ತು ಧ್ವಜಕಟ್ಟೆಯ ಮೇಲೂ ಗುಂಪು ದಾಳಿ ಮಾಡಿದೆ. ಗಲಭೆಯಲ್ಲಿ 11 ಪೊಲೀಸರು ಸಹ ಗಾಯಗೊಂಡಿದ್ದಾರೆ ಮತ್ತು ಅವರಿಗೆ ಚಿಕಿತ್ಸೆ ಒದಗಿಸಲಾಗಿದೆ. ಇಂಥ ಗಲಭೆಗಳು ನಡೆಯುವಾಗ ಪೊಲೀಸರು ಏನೂ ಮಾಡಲಾಗಲ್ಲವೇ? ಅಶ್ರವಾಯು ಸಿಡಿಸುವುದು ಅಥವಾ ಲಾಠಿ ಚಾರ್ಜ್ ಮಾಡಬೇಕಾದರೆ ಅವರಿಗೆ ಮೇಲಿಂದ ಆದೇಶ ಬರಬೇಕು. ಲಾಕಪ್ ಡೆತ್ ತನಿಖೆಯಾಗಬೇಕು ಅದು ಬೇರೆ ವಿಷಯ, ಆದರೆ ಉದ್ರಿಕ್ತ ಗುಂಪು ಹೀಗೆ ಪೊಲೀಸ್ ಠಾಣೆಯ ಮೇಲೆಯೇ ದಾಳಿ ನಡೆಸುವುದು ಯಾವ ಕಾರಣಕ್ಕೂ ಸಮರ್ಥನೀಯವಲ್ಲ.

kiniudupi@rediffmail.com

No Comments

Leave A Comment