ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಬೆಂಗಳೂರಿನಲ್ಲಿ ಕೆಎ​ಎಸ್ ಅಧಿಕಾರಿಯ ಪತ್ನಿ ಆತ್ಮಹತ್ಯೆ: ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಬೆಂಗಳೂರು, ಮೇ 11: ಕೆಎ​ಎಸ್ ಅಧಿಕಾರಿಯ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ​ಸಂಜಯ್​ನಗರದ ನಿವಾಸದಲ್ಲಿ ನಡೆದಿದೆ. ಚೈತ್ರಾಗೌಡ ಮೃತ ಮಹಿಳೆ. ವೃತ್ತಿಯಲ್ಲಿ ವಕೀಲರಾಗಿದ್ದರು. ಮನೆಯಲ್ಲಿ ಫ್ಯಾನ್​​ಗೆ ನೇಣುಬಿಗಿದ ಸ್ಥಿತಿಯಲ್ಲಿ ಶವಪತ್ತೆ ಆಗಿದೆ. ಸದ್ಯ ಘಟನಾ ಸ್ಥಳಕ್ಕೆ ಸಂಜಯ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

3 ತಿಂಗಳ ಹಿಂದೆ ಬರೆದಿಟ್ಟಿದ್ದ ನೋಟ್​ ಪತ್ತೆ

ಮನೆಯಲ್ಲಿ 3 ತಿಂಗಳ ಹಿಂದೆ ಬರೆದಿಟ್ಟಿದ್ದ ನೋಟ್​ ಪತ್ತೆ ಆಗಿದೆ. ಇದೇ ಮಾ.11ರಂದು ಬರೆದಿದ್ದ ಡೆತ್​​ ನೋಟ್ ಪತ್ತೆಯಾಗಿದ್ದು, ನನ್ನ ಗಂಡ ಒಳ್ಳೆಯವರು, ಜೀವನ ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ಡಿಪ್ರೆಶನ್​​ನಿಂದ ಬಳಲುತ್ತಿದ್ದೇನೆ. ಅದರಿಂದ ಹೊರ ಬರಲು ಸಾಕಷ್ಟು ಪ್ರಯತ್ನಿಸಿದೆ ಆಗಲಿಲ್ಲ, ಹಾಗಾಗಿ ನನ್ನ ಜೀವನ ಕೊನೆಗೊಳಿಸುತ್ತಿದ್ದೇನೆ. ಮಗು ಚೆನ್ನಾಗಿ ನೋಡಿಕೊಂಡು ಲೈಫ್ ಎಂಜಾಯ್ ಮಾಡಿ. ನಾನು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಅಂತ ಗೊತ್ತಿದೆ. ಆದ್ರೂ ನನ್ನ ಜೀವನ ಅಂತ್ಯ ಮಾಡುತ್ತಿದ್ದೇನೆ ಎಂದು ಮನೆಯಲ್ಲಿ 3 ತಿಂಗಳ ಹಿಂದೆ ಬರೆದಿಟ್ಟಿದ್ದ ನೋಟ್​ ಪತ್ತೆ ಆಗಿದೆ.

ಮೂರು ಅಂತಸ್ತಿನ ಅಪಾರ್ಟ್ಮೆಂಟ್​ನಲ್ಲಿ ವಾಸವಾಗಿದ್ದರು. ಎರಡನೇ ಫ್ಲಾಟ್​​ನಲ್ಲಿ ಮೃತಳ ಕುಟುಂಬಸ್ಥರು ವಾಸವಾಗಿದ್ದು, ಇನ್ನೊಂದು ಫ್ಲಾಟ್​​ನಲ್ಲಿ ಮೃತಳ ತಮ್ಮ ವಾಸವಾಗಿದ್ದಾರೆ. ಬೆಳಗ್ಗೆ ಹತ್ತು ಘಂಟೆ ಸುಮಾರಿಗೆ ಪತಿ ಶಿವ ಕುಮಾರ್ ಜೊತೆಗೆ ಮಾತನಾಡಿದ್ದಾರೆ. ನಂತರ ತಮ್ಮನ ಜೊತಗೆ ಮಾತನಾಡಿದ್ದಾರೆ. ಹನ್ನೊಂದು ಘಂಟೆ ಸುಮಾರಿಗೆ ಮೃತಳ ತಮ್ಮ ಕರೆದಾಗ ಸ್ಪಂದಿಸಿಲ್ಲ.

ಈ ವೇಳೆ ಕಿಟಕಿಯಿಂದ ನೋಡಿದಾಗ ಫ್ಯಾನ್​ಗೆ ನೇಣು ಹಾಕಿಕೊಂಡು ಸಾವನಪ್ಪಿರುವುದು ಕಂಡು ಬಂದಿದೆ. ತಕ್ಷಣ ಮೃತಳ ತಮ್ಮ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೀನ್ ಆಫ್ ಕ್ರೈಂ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಮೃತ ದೇಹ ಇಳಿಸಲಾಗಿದೆ.

ಡಿಸಿಪಿ ಸೈದುಲು ಅದಾವತ್ ಹೇಳಿದ್ದಿಷ್ಟು 

ಉತ್ತರ ವಿಭಾಗ ಡಿಸಿಪಿ ಸೈದುಲು ಅದಾವತ್ ಪ್ರತಿಕ್ರಿಯಿಸಿದ್ದು, ಕೆಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದೂರು ಬಂದಿದೆ. ಸೀರೆಯಿಂದ ಫ್ಯಾನ್​​ಗೆ ಹ್ಯಾಂಗ್ ಮಾಡ್ಕೊಂಡು ಆತ್ಮಹತ್ಯೆ ಆಗಿದೆ. ಇದರ ಬಗ್ಗೆ ದೂರು ದಾಖಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಒಂದು ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ ಅಂತಾ ಬರೆದಿರುವುದು ಗೊತ್ತಾಗಿದೆ.

ಅದನ್ನ ಅವರೇ ಬರೆದಿದ್ದಾರಾ ಅಂತಾ ಪರಿಶೀಲನೆ ನಡೆದಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ. ತನಿಖೆ ಬಳಿಕ ವಿಚಾರ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

kiniudupi@rediffmail.com

No Comments

Leave A Comment