ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಬ್ರೆಜಿಲ್ ಪ್ರವಾಹ: ಸಾವಿನ ಸಂಖ್ಯೆ 90 ಕ್ಕೆ ಏರಿಕೆ; ನಿರಾಶ್ರಿತರಾದ ಸಾವಿರಾರು ಮಂದಿ
ರಿಯೊ ಗ್ರಾಂಡೆ ಡೊ ಸುಲ್, ಮೇ.8: ದಕ್ಷಿಣ ಬ್ರೆಜಿಲ್ ನಲ್ಲಿ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. ಹಾಗೂ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.
ಪ್ರವಾಹದಿಂದಾಗಿ ಈವರೆಗೆ 1,55,000 ಮಂದಿ ಸ್ಥಳಾಂತರ ಗೊಂಡಿದ್ದಾರೆ. ಪ್ರವಾಹದಿಂದ ಮನೆಗಳು, ಸೇತುವೆಗಳು, ರಸ್ತೆಗಳು ಕುಸಿದಿದ್ದು, ಇವುಗಳ ಅವಶೇಷಗಳ ಕೆಳಗೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಪ್ರವಾಹದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಮೂರು ದಿನಗಳಿಂದ ಜನರಿಗೆ ಆಹಾರ ಸಿಗದೆ ಜನರು ಆಹಾರಕ್ಕಾಗಿ ಹಾತೊರೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.