ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ತಾಂಜಾನಿಯಾದಲ್ಲಿ ಭಾರೀ ಮಳೆ, ಪ್ರವಾಹ – 155 ಜನರು ಮೃತ್ಯು
ಡೋಡೋಮಾ,ಏ.26: ತಾಂಜಾನಿಯಾದಲ್ಲಿ ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದ್ದು, , ಪ್ರವಾಹ ಮತ್ತು ಭೂಕುಸಿತದಿಂದ ಜನತೆ ತತ್ತರಿಸಿದ್ದಾರೆ. ದೇಶದಲ್ಲಿ ಇದುವರೆಗೂ 155 ಜನರು ಸಾವಿಗೀಡಾಗಿದ್ದು, 236 ಮಂದಿ ಗಾಯಗೊಂಡಿದ್ದಾರೆ.
ಪೂರ್ವ ಆಫ್ರಿಕಾದಾದ್ಯಂತ ತೀವ್ರವಾದ ಮಳೆ ಮುಂದುವರಿದಿದೆ. ಎಲ್ ನಿನೋ ಹವಾಮಾನದ ಮಾದರಿಯು ಭಾರೀ ಮಳೆಗೆ ಕಾರಣವಾಗಿದೆ. ಇದರಿಂದಾಗಿ ಪ್ರವಾಹ ಹೆಚ್ಚಾಗಿದೆ. ರಸ್ತೆಗಳು, ಸೇತುವೆಗಳು ಮತ್ತು ರೈಲು ಮಾರ್ಗಗಳು ನಾಶವಾಗಿವೆ ಎಂದು ಪ್ರಧಾನಿ ಕಾಸಿಮ್ ಮಜಲಿವಾ ತಿಳಿಸಿದ್ದಾರೆ.
ಪ್ರವಾಹದಿಂದ 51,000 ಮನೆಗಳಿಗೆ ಹಾನಿಯಾಗಿದೆ. 2 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ. ಜನರ ರಕ್ಷಣೆಗೆ ತುರ್ತು ಸೇವೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಮಳೆಗಾಲದಲ್ಲಿ ಪೂರ್ವ ಆಫ್ರಿಕಾದ ಪ್ರದೇಶವು ವಾಡಿಕೆಗಿಂತ ಹೆಚ್ಚಿನ ಮಳೆಯಿಂದ ಜರ್ಜರಿತವಾಗಿದೆ. ನೆರೆಯ ಬುರುಂಡಿ ಮತ್ತು ಕೀನ್ಯಾದಲ್ಲಿ ಸಹ ಪ್ರವಾಹ ವರದಿಯಾಗಿದೆ.