ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಅಯ್ಯೋ ದುರ್ವಿಧಿಯೇ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ಸಾವು

ಯಾದಗಿರಿ, ಏ.23: ಬಿಸಿಲ ಬೇಗೆಗೆ ತಾಪ ತಪ್ಪಿಸಿಕೊಳ್ಳಲು ಕೆರೆಯಲ್ಲಿ ಈಜಾಡಲು ಹೋಗಿದ್ದ ಮೂವರು ಬಾಲಕರು ಧಾರುಣ ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ. ಹೈಯಾಳಪ್ಪ(11), ಶರಣಬಸವ(10) ಹಾಗೂ ಅನಿಲ(10) ಕೊನೆಯುಸಿರೆಳೆದಿದ್ದಾರೆ.

ಮೃತರಲ್ಲಿ ಇಬ್ಬರು ನಗನೂರು ಗ್ರಾಮದವರಾದರೆ, ಇನ್ನೋರ್ವ ಬಾಲಕ ಖಾನಾಪುರ ಗ್ರಾಮದ‌ ನಿವಾಸಿ. ಮೃತ ಮೂವರು ಬಾಲಕರ ಶವವನ್ನು ಸ್ಥಳೀಯರು ಹೊರೆತೆಗೆದಿದ್ದಾರೆ. ಈ ಕುರಿತು ಕೆಂಭಾವಿ‌ ಪೊಲೀಸ್ ಠಾಣಾ‌‌ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment