ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ತೈವಾನ್‌ನಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ

ತೈಪೆ, ಏ.23: ತೈವಾನ್‌ನಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ತೈವಾನ್‌ನ ಪೂರ್ವ ಕರಾವಳಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿರುವುದಾಗಿ ವರದಿಯಾಗಿದೆ.<

ಸೋಮವಾರ ರಾತ್ರಿ ಮತ್ತು ಮಂಗಳವಾರ ಮುಂಜಾನೆ ಈ ಘಟನೆ ನಡೆದಿದ್ದು, ಎರಡು ಬಾರಿ ಪ್ರಬಲ ಭೂಕಂಪನಗಳು ಸಂಭವಿಸಿವೆ. ಜೊತೆಗೆ ಹುವಾಲಿಯನ್‌ ನ ಪೂರ್ವ ಕೌಂಟಿಯಲ್ಲಿ ಭೂಮಿಯಿಂದ 5.5 ಕಿ.ಮೀ.ಗಳಷ್ಟು ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಇದೆ ಎಂದು ತೈವಾನ್‌ನ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಭೂಕಂಪನದಿಂದಾಗಿ ಹುವಾಲಿಯನ್ ಪ್ರದೇಶದಲ್ಲಿನ ಬಹುತೇಕ ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಈ ಪೈಕಿ ಒಂದು ಕಟ್ಟಡ ಕುಸಿದು ಬಿದ್ದಿದೆ. ಹಾಗೂ ಇನ್ನೊಂದು ರಸ್ತೆಗೆ ವಾಲಿಕೊಂಡಿದೆ. ತೈವಾನ್ ನೊಂದಿಗೆ ಜಪಾನ್, ಚೀನಾ ಮತ್ತು ಫಿಲಿಪೈನ್ಸ್‌ ನಲ್ಲಿಯೂ ಲಘು ಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ.

No Comments

Leave A Comment