``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

17ನೇ ವರ್ಷದ ವೆಡ್ಡಿಂಗ್​ ಆ್ಯನಿವರ್ಸರಿ ಆಚರಿಸಿದ ಅಭಿಷೇಕ್​ ಬಚ್ಚನ್​, ಐಶ್ವರ್ಯಾ ರೈ

ಬಾಲಿವುಡ್​ನ ಸ್ಟಾರ್​ ಕಪಲ್​ ಆದಂತಹ ಅಭಿಷೇಕ್​ ಬಚ್ಚನ್​ ಮತ್ತು  ಐಶ್ವರ್ಯಾ ಅವರು 17ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಂಡಿದ್ದಾರೆ. ಏಪ್ರಿಲ್​ 20ರಂದು ವಿವಾಹ ವಾರ್ಷಿಕೋತ್ಸವ  ಸೆಲೆಬ್ರೇಟ್​ ಮಾಡಿರುವ ಅವರು ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಅವರ ಜೊತೆ ಮಗಳು ಆರಾಧ್ಯಾ ಕೂಡ ಸಾಥ್​ ನೀಡಿದ್ದಾರೆ. ಐಶ್ವರ್ಯಾ ರೈ ಹಾಗೂ ಅಭಿಷೇಕ್​ ಬಚ್ಚನ್  ಜೋಡಿಗೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ. ಈ ಫೋಟೋ ನೋಡಿದ ಬಳಿಕ ಗಾಸಿಪ್​ ಮಂದಿಯ ಬಾಯಿಗೆ ಬೀಗ ಹಾಕಿದಂತಾಗಿದೆ.

ಒಂದಷ್ಟು ದಿನಗಳ ಹಿಂದೆ ​ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಬಚ್ಚನ್​ ಅವರ ಬಗ್ಗೆ ಗಾಸಿಪ್​ ಹಬ್ಬಿತ್ತು. ಅವರಿಬ್ಬರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎಂದು ಕೆಲವರು ಗಾಳಿ ಸುದ್ದಿ ಹಬ್ಬಿಸಿದ್ದರು. ಅಭಿಮಾನಿಗಳು ಕೂಡ ಅದನ್ನು ನಿಜ ಎಂದು ನಂಬುವ ಹಂತಕ್ಕೆ ಹೋಗಿದ್ದರು. ಆದರೆ ನಂತರದ ದಿನಗಳಲ್ಲಿ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಬಚ್ಚನ್​ ಜೊತೆಯಾಗಿ ಕೆಲವು ಕಾರ್ಯಕ್ರಮಗಳಿಗೆ ಹಾಜರಾದಾಗ ಗಾಸಿಪ್​ಗಳಿಗೆ ಪೂರ್ಣವಿರಾಮ ಬಿತ್ತು.

ಬಾಲಿವುಡ್​ನಲ್ಲಿ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಬಚ್ಚನ್​ ಅವರಿಗೆ ಸಖತ್​ ಬೇಡಿಕೆ ಇದೆ. ತಮ್ಮದೇ ರೀತಿಯಲ್ಲಿ ಇಬ್ಬರೂ ಗುರುತಿಸಿಕೊಂಡಿದ್ದಾರೆ. ಅತ್ತ ಅಮಿತಾಭ್ ಬಚ್ಚನ್​ ಕೂಡ ಫುಲ್​ ಆ್ಯಕ್ಟೀವ್​ ಆಗಿದ್ದಾರೆ. ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ದಿನಗಳಲ್ಲಿ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ದಂಪತಿಯ ಪುತ್ರಿ ಆರಾಧ್ಯಾ ಕೂಡ ವೇದಿಕೆಗಳಲ್ಲಿ ಮಾತನಾಡಿ ಗಮನ ಸೆಳೆಯುತ್ತಿದ್ದಾರೆ. ಅವರು ಯಾವಾಗ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಐಶ್ವರ್ಯಾ ರೈ ಹಾಗೂ ಅಭಿಷೇಕ್​ ಬಚ್ಚನ್​ ಅವರು ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದರು. ಆ ಬಳಿಕ ಅವರ ನಡುವೆ ಸ್ನೇಹ ಬೆಳೆಯಿತು. ನಂತರ ಅವರು ಮದುವೆ ಆಗುವ ನಿರ್ಧಾರಕ್ಕೆ ಬಂದರು. 2007ರಲ್ಲಿ ಅವರಿಬ್ಬರು ಹಸೆಮಣೆ ಏರಿದರು. 2011ರಲ್ಲಿ ಐಶ್ವರ್ಯಾ ರೈ ಅವರು ಹೆಣ್ಣು ಮಗುವಿಗೆ (ಆರಾಧ್ಯಾ) ಜನ್ಮ ನೀಡಿದರು. ಐಶ್ವರ್ಯಾ ರೈ ಹಾಗೂ ಅಭಿಷೇಕ್​ ಬಚ್ಚನ್​ ಅವರ ಸುಖ ಸಂಸಾರಕ್ಕೆ ಈಗ 17 ವರ್ಷ ತುಂಬಿದೆ.

No Comments

Leave A Comment