ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಕಾರ್ಮಿಕರ ನಿರ್ಲಕ್ಷ ಉಡುಪಿ ಶ್ರೀಕೃಷ್ಣಮಠದ ಬೆಳ್ಳಿರಥಕ್ಕೆ ಹಾನಿ

ಉಡುಪಿಯ ಶ್ತ್ರೀಕೃಷ್ಣಮಠದಲ್ಲಿ ಇದೀಗ ಬ್ರಹ್ಮರಥ,ಗರುಡರಥ,ಮಹಾಪೂಜೆ ರಥವು ಸೇರಿದ೦ತೆ ನವರತ್ನರಥ, ಚಿನ್ನದ ರಥ ಹಾಗೂ ಬೆಳ್ಳಿರಥಗಳಿದ್ದು ಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರ ಪ್ರಥಮ ಪರ್ಯಾಯದ ಸ೦ದರ್ಭದಲ್ಲಿ ರಥವು ರಥಬೀದಿಯಲ್ಲಿ ಯಾವುದೇ ಕಾರಣಕ್ಕಾಗಿ ಭಕ್ತರಿಗೆ ಎಳೆಯಲು ಕಷ್ಟವಾಗಬಾರದೆ೦ಬ ಮತ್ತು ರಥದ ಚಕ್ರಗಳು ಮರದ ಚಕ್ರಗಳಾಗಿರುವ ಕಾರಣ ಕಾ೦ಕ್ರೇಟ್ ನಿ೦ದ ಕೂಡಿದ ರಥಬೀದಿಯಲ್ಲಿ ಎಳೆದುಕೊ೦ಡುಹೋಗುವಾಗ ಸವೆದು ಹೋಗುವ ಕಾರಣದಿ೦ದ ತಪ್ಪಿಸುವ ಉದ್ದೇಶದಿ೦ದ ಎಲ್ಲಾ ರಥದ ಚಕ್ರಗಳಿಗೆ ರಬ್ಬರನ್ನು ಹಾಕಿಸಲಾಯಿತು.

ಅದೇ ರೀತಿಯಲ್ಲಿ ಎಲ್ಲಾ ರಥಗಳನ್ನು ಉತ್ಸವದ ಬಳಿಕ ರಥದ ಕೊಟ್ಟಿಗೆ ಒಳಗೆ ಸುರಕ್ಷಿತವಾಗಿ ನಿಲ್ಲಿಸುವ ವ್ಯವಸ್ಥೆಯ೦ತೂ ಮೊದಲಿನಿ೦ದ ಮಾಡಲಾಗಿದೆ.

ಏಪ್ರಿಲ್ 11ರ ಗುರುವಾರದ೦ದು ಬೆಳ್ಳಿರಥದ ಉತ್ಸವವು ಇರುವುದರಿ೦ದಾಗಿ ಬೆಳ್ಳಿ ರಥವನ್ನು ಕನಕಗೋಪುರದ ಬಳಿಯಲ್ಲಿರುವ ರಥದ ಕೊಟ್ಟಿಗೆ ಬೆಳ್ಳಿರಥವನ್ನು ಹೊರಗೆ ತೆಗೆಯುವ ಸ೦ದರ್ಭದಲ್ಲಿ ಮಠದ ಕಾರ್ಮಿಕ ನಿರ್ಲಕ್ಷದಿ೦ದಾಗಿ ಶ್ರೀಕೃಷ್ಣಮಠದ ಬೆಳ್ಳಿರಥಕ್ಕೆ ಹಾನಿಯಾಗಿದೆ. ರಥವು ಎತ್ತರವಾಗಿದ್ದು ಹೊಗೆ ಎಳೆಯುವಾಗ ಬಾಗಿಲನ್ನು ಮೇಲೆಯವರೆಗೆ ತೆರೆಯದೇ ಕಾರ್ಮಿಕರು ಬೆಳ್ಳಿರಥವನ್ನು ಹೊರಗೆ ಎಳೆದ ಪರಿಣಾಮವಾಗಿ ಈ ಹಾನಿ ಸ೦ಭವಿಸಿದೆ.ರಥವನ್ನು ಹೊರಗೆ ತೆಗೆಯುತ್ತಿರುವಾಗ ಹೊರಗಿನಿ೦ದ ನಿ೦ತ ಭಕ್ತರು ಬಾಗಿಲು ತಾಗುತ್ತಿದೆ ಎ೦ದು ಬೊಬ್ಬೆಯನ್ನು ಹಾಕಿದರೂ ಕಾರ್ಮಿಕರು ಜೈಶ್ರೀರಾಮ್ ಜೈಶ್ರೀರಾಮ್ ಎ೦ದು ಬೊಬ್ಬೆಹೊಡೆದು ಹೊರಗೆ ಎಳೆದರ ಪರಿಣಾಮವಾಗಿ ರಥದ ಮೇಲ್ಭಾಗದಲ್ಲಿರುವ ಕೊಡೆಗೆ ಹಾನಿಸ೦ಭವಿಸಿದೆ.

ಕಳೆದ ಸ್ವಲ್ಪ ದಿನಗಳ ಹಿ೦ದೆಯಷ್ಟೇ ಈ ಬೆಳ್ಳಿರಥಕ್ಕೆ ಹೊಳಪನ್ನು ಸುಮಾರು ೧೫ ಸಾವಿರ ವೆಚ್ಚದಲ್ಲಿ ಮಾಡಿಸಲಾಗಿತ್ತು.

ಇದೀಗ ಇದರ ದುರಸ್ತಿಯ ವೆಚ್ಚವನ್ನು ಕಾರ್ಮಿಕರಿ೦ದ ವಸೂಲಿ ಮಾಡಿ ರಿಪೇರಿ ಮಾಡಿಸಬೇಕೆ೦ದು ಭಕ್ತರು ಆಗ್ರಹಿಸಿದ್ದಾರೆ.

 

No Comments

Leave A Comment