ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಬಂಗಾಳದಲ್ಲಿ ಚಂಡಮಾರುತ ಅಬ್ಬರಕ್ಕೆ 4 ಬಲಿ, ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗೆ ಹಾನಿ!
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ಅಪ್ಪಳಿಸಿದ್ದು, ಈ ವೇಳೆ ಕನಿಷ್ಠ 4 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾನುವಾರ ಚಂಡಮಾರುತ ಭಾರಿ ಹಾನಿಯನ್ನುಂಟುಮಾಡಿದ್ದು, ಘಟನೆಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 70 ಜನರು ಗಾಯಗೊಂಡಿದ್ದಾರೆ.
ಮೃತರನ್ನು ಸೆಂಪಾರಾದ ದಿಜೇಂದ್ರ ನಾರಾಯಣ ಸರ್ಕಾರ್ (52), ಪಹರ್‌ಪುರದ ಅನಿಮಾ ಬರ್ಮನ್ (45), ಪುತಿಮಾರಿಯ ಜಗನ್ ರಾಯ್ (72) ಮತ್ತು ರಾಜರ್‌ಹತ್‌ನ ಸಮರ್ ರಾಯ್ (64) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತ ಪರಿಣಾಮ ಜಿಲ್ಲಾ ಕೇಂದ್ರ ಪಟ್ಟಣ ಜಲ್ಪೈಗುರಿಯ ಹೆಚ್ಚಿನ ಭಾಗಗಳು ಮತ್ತು ನೆರೆಯ ಮೈನಾಗೂರಿನ ಅನೇಕ ಪ್ರದೇಶಗಳನ್ನು ಧ್ವಂಸಗೊಳಿಸಿವೆ. ಅಲ್ಲದೆ ಹಲವಾರು ಮನೆಗಳಿಗೆ ಹಾನಿಯಾಗಿದೆ. ಮರಗಳು ಉರುಳಿಬಿದ್ದಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ರಾಜರಹತ್, ಬರ್ನಿಶ್, ಬಕಾಲಿ, ಜೋರ್ಪಕ್ಡಿ, ಮಧಬ್ದಂಗ ಮತ್ತು ಸಪ್ತಿಬಾರಿ ಪ್ರದೇಶಗಳು ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಧುಪ್ಗುರಿ ಶಾಸಕ ನಿರ್ಮಲ್ ಚಂದ್ರ ರಾಯ್ ಹೇಳಿದ್ದಾರೆ.