ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

“ಕಿರಾತಕ” ಖ್ಯಾತಿಯ ಬಹುಭಾಷಾ ನಟ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನ

ಚೆನ್ನೈ: ಮಾರ್ಚ್ : 30: ಪ್ರೈಮ್ ಟಿವಿ ನ್ಯೂಸ್ : ಬಹುಭಾಷಾ ನಟ ಡೇನಿಯಲ್ ಬಾಲಾಜಿ (48) ಅವರು ಇಂದು  ಹೃದಯಾಘಾತದಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಈಚೆಗೆ ಡೇನಿಯಲ್ ಬಾಲಾಜಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಡೇನಿಯಲ್ ಬಾಲಾಜಿ ಅವರು ತಮಿಳು ಕಿರುತೆರೆ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ‘ಚಿತ್ತಿ’ ಧಾರಾವಾಹಿಯಲ್ಲಿನ ಪಾತ್ರಕ್ಕಾಗಿ ಹೆಚ್ಚು ಖ್ಯಾತಿ ಪಡೆದಿದ್ದರು. ಬಳಿಕ ‘ಕಾಖಾ ಕಾಖಾ’, ‘ಪೊಲ್ಲಾಧವನ್’, ‘ವೆಟ್ಟೈಯಾಡು‌ ವಿಲಾಯಾಡು’, ‘ವಡಾ ಚೆನ್ನೈ’ ‘ಬಿಗಿಲ್‌’ ಸೇರಿದಂತೆ 40ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಯಶ್‌ ಅಭಿನಯದ ‘ಕಿರಾತಕ’ ಚಿತ್ರದಲ್ಲೂ ಡೇನಿಯಲ್ ಕಾಣಿಸಿಕೊಂಡಿದ್ದರು. ಜತೆಗೆ, ತೆಲುಗು, ಮಲಯಾಳಂ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು.

ಡೇನಿಯಲ್ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಡೇನಿಯಲ್ ಅವರ ಅಂತ್ಯಕ್ರಿಯೆ ಪುರಸೈವಾಲ್ಕಂನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

No Comments

Leave A Comment