ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಮಾ.30ರ೦ದು ‘ಆನಂದವನ’ ಎಂಬ ನೂತನ ಪ್ರವಚನ ವೇದಿಕೆ ಹಾಗೂ ನೂತನ ಮಾಹಿತಿ ಅಂತರ್ಜಾಲ ತಾಣದ ಉದ್ಘಾಟನೆ
ಉಡುಪಿ:‘ಜ್ಞಾನದೀಪ’ ಎಲ್ಲೆಡೆ ಬೆಳಗಲೆಂದು ‘ಜ್ಞಾನಯಜ್ಞ’ಕ್ಕಾಗಿ ವಿಶೇಷವಾಗಿ ನಿರ್ಮಾಣಗೊಂಡಿರುವ ‘ಆನಂದವನ’ ಎಂಬ ನೂತನ ಪ್ರವಚನ ವೇದಿಕೆಯ ಉದ್ಘಾಟನೆಯನ್ನು ಹಾಗೂ ದೇಶ-ವಿದೇಶಗಳಲ್ಲಿ ಇರುವ ಮಠದ ಭಕ್ತರಿಗೆ ಶ್ರೀಅದಮಾರು ಮಠದ ಬಗ್ಗೆ, ಸೇವೆಗಳು ಮತ್ತು ಶಾಖೆಗಳ ಬಗ್ಗೆ ಎಲ್ಲ ಮಾಹಿತಿ ಇರುವ, ಅಲ್ಲದೆ ಮಠದ ವಿದ್ಯಾಸಂಸ್ಥೆಗಳ ವಿವರ, ವಸತಿಗೃಹಗಳ ಸಂಪರ್ಕ, ಉಡುಪಿ ಕೃಷ್ಣ ಮತ್ತು ಪರ್ಯಾಯ ಈ ಎಲ್ಲ ಮಾಹಿತಿಗಳಿರುವ ನೂತನ ಅಂತರ್ಜಾಲ ತಾಣದ (ವೆಬ್ಸೈಟ್) ಉದ್ಘಾಟನೆಯನ್ನು ಶ್ರೀಅದಮಾರು ಮಠದ ಉಭಯಶ್ರೀಪಾದರು ತಾ.30/03/2024ರಂದು ನಡೆಸಿಕೊಡಲಿದ್ದಾರೆ.
ಉದ್ಘಾಟನೆ/ಅನುಗ್ರಹ ಸಂದೇಶ : ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು,ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು
ಅಂತರ್ಜಾಲ ತಾಣದ ಬಗ್ಗೆ ಪ್ರಾತ್ಯಕ್ಷಿಕೆ : ನಟರಾಜ ಮತ್ತು ತಂಡದವರಿಂದ
ವಿಶೇಷ ಉಪನ್ಯಾಸ :ಡಾ. ಲಕ್ಷ್ಮೀಶ ಭಟ್, ಮುದರಂಗಡಿ.ಸನ್ಮಾನ : ನಟರಾಜ್, ಅಂತರ್ಜಾಲತಾಣ ತಂತ್ರಜ್ಞರು
ಸಮಯ: ಸಂಜೆ 04.30ರಿಂದ 06.00ರವರೆಗೆ (ಸ್ಥಳ: ಆನಂದವನ, ಶ್ರೀಅದಮಾರು ಮಠ, ಉಡುಪಿ)
ಸಾಂಸ್ಕೃತಿಕ ಕಾರ್ಯಕ್ರಮ :ಶ್ರೀನಿವಾಸ ಪೆಜತ್ತಾಯ ತಂಡದವರಿಂದ ದ್ವಾದಶ ಸ್ತೋತ್ರಗಳ ಹಾಡುಗಾರಿಕೆ ಮತ್ತು ಕೀರ್ತನೆ (6.00-7.00)ತಾ.31/03/2024ರಂದು ‘ಆನಂದವನ’ದಲ್ಲಿ ಡಾ. ಶತಾವಧಾನಿ ಉಡುಪಿ ರಾಮನಾಥ ಆಚಾರ್ಯರ ನೂತನಕೃತಿ ’ಕೃಷ್ಣಸಮೀಕ್ಷಾ-1’ ಇದರ ಲೋಕಾರ್ಪಣೆಯನ್ನು ಶ್ರೀಅದಮಾರು ಮಠದ ಉಭಯಶ್ರೀಪಾದರು ನಡೆಸಿಕೊಡಲಿದ್ದಾರೆ.
ಕೃತಿ ಪರಿಚಯ : ವಿ. ಕೃಷ್ಣರಾಜ ಭಟ್ಟ, ಕುತ್ಪಾಡಿ,ಲೋಕಾರ್ಪಣೆ/ಅನುಗ್ರಹ ಸಂದೇಶ :ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು
ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು
ವಿಶೇಷ ಉಪನ್ಯಾಸ : ಕೃಷ್ಣ- ಆನಂದ,ಉಪನ್ಯಾಸಕರು :ಡಾ. ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ
ಸನ್ಮಾನ :CA ಕೆ. ವೆಂಕಟೇಶ ಶೆಣೈ, ಬೆಂಗಳೂರು ಮತ್ತು ಗೋಪಾಲಕೃಷ್ಣ ಪೈ, ಕುಮಟಾ
ಸಮಯ: ಸಂಜೆ 04.30ರಿಂದ 06.00ರವರೆಗೆ (ಸ್ಥಳ: ಆನಂದವನ, ಶ್ರೀಅದಮಾರು ಮಠ, ಉಡುಪಿ)
ಸಾಂಸ್ಕೃತಿಕ ಕಾರ್ಯಕ್ರಮ :ಶ್ರೀನಿವಾಸ ಪೆಜತ್ತಾಯ ತಂಡದವರಿಂದ ದ್ವಾದಶ ಸ್ತೋತ್ರಗಳ,ಹಾಡುಗಾರಿಕೆ ಮತ್ತು ಕೀರ್ತನೆ (6.00-7.00) ಉಡುಪಿಯ ರಥಬೀದಿಯಲ್ಲಿರುವ ಶ್ರೀಅದಮಾರು ಮಠದ ಸಹಜ-ಸ್ವಚ್ಛ-ಸುಂದರ-ನೈಸರ್ಗಿಕ ವಾತಾವರಣ ‘ಆನಂದವನ’ದಲ್ಲಿ ನಡೆಯುವ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಭಾಗವಹಿಸಬೇಕೆಂದು ಆನಂದ ಪ್ರಕಾಶನ, ಶ್ರೀಅದಮಾರು ಮಠ, ಉಡುಪಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.