ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ವಾಯುವ್ಯ ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ;ಐವರು ಚೀನಾದ 6ಮ೦ದಿ ಪ್ರಜೆಗಳ ಸಾವು
ಪೇಶಾವರ ಮಾರ್ಚ್ 26: ವಾಯವ್ಯ ಪಾಕಿಸ್ತಾನದಲ್ಲಿ (Pakistan) ಮಂಗಳವಾರ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ (suicide bomb) ಐವರು ಚೀನಾ ಪ್ರಜೆಗಳು ಸಾವಿಗೀಡಾಗಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ಲಾಮಾಬಾದ್‌ನಿಂದ ಖೈಬರ್ ಪಖ್ತುನ್‌ಖ್ವಾ (Khyber Pakhtunkhwa) ಪ್ರಾಂತ್ಯದ ದಾಸುನಲ್ಲಿರುವ ತಮ್ಮ ಶಿಬಿರಕ್ಕೆ ತೆರಳುತ್ತಿದ್ದ ಚೀನಾದ ಇಂಜಿನಿಯರ್‌ಗಳ ಬೆಂಗಾವಲು ವಾಹನಕ್ಕೆ ಆತ್ಮಾಹುತಿ ಬಾಂಬರ್, ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆದಿದ್ದಾನೆ ಎಂದು ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ಅಲಿ ಗಂದಾಪುರ್ ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ದಾಳಿಯಲ್ಲಿ ಐವರು ಚೀನಿ ಪ್ರಜೆಗಳು ಮತ್ತು ಅವರ ಪಾಕಿಸ್ತಾನಿ ಚಾಲಕ ಸಾವಿಗೀಡಾಗಿದ್ದಾನೆ ಎಂದು ಮೊಹಮ್ಮದ್ ಅಲಿ ಗಂಡಾಪುರ್ ಹೇಳಿದ್ದಾರೆ. ಖೈಬರ್ ಪಖ್ತುಂಖ್ವಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಂಗಾವಲು ಪಡೆಯಲ್ಲಿ ಉಳಿದವರಿಗೆ ರಕ್ಷಣೆ ನೀಡಲಾಗಿದೆ ಎಂದು ಗಂದಾಪುರ್ ತಿಳಿಸಿದ್ದಾರೆ.
ಚೀನಾದ ಎಂಜಿನಿಯರ್‌ಗಳು ಮತ್ತು ಪಾಕಿಸ್ತಾನಿ ನಿರ್ಮಾಣ ಕಾರ್ಮಿಕರು ಹಲವಾರು ವರ್ಷಗಳಿಂದ ಪಶ್ಚಿಮ ಪ್ರಾಂತ್ಯದ ಖೈಬರ್-ಪಕ್ತುಂಕ್ವಾದಲ್ಲಿ ಬೀಜಿಂಗ್‌ನ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್‌ನ ಭಾಗವಾಗಿ ಜಲವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ದಾಸು ಪ್ರಮುಖ ಅಣೆಕಟ್ಟು ಯೋಜನೆಗಳ ತವರು ಆಗಿದ್ದು ಈ ಪ್ರದೇಶದಲ್ಲಿ ಈ ಹಿಂದೆಯೂ ದಾಳಿ ನಡೆದಿದೆ.2021ರಲ್ಲಿ ಬಸ್‌ನಲ್ಲಿ ನಡೆದ ಸ್ಫೋಟದಲ್ಲಿ ಒಂಬತ್ತು ಚೀನಾ ಪ್ರಜೆಗಳು ಸೇರಿದಂತೆ 13 ಮಂದಿ ಸಾವಿಗೀಡಾಗಿದ್ದರು.ದಾಸು ಜಲವಿದ್ಯುತ್ ಯೋಜನಾ ಸ್ಥಳಕ್ಕೆ ಚೀನಾದ ಎಂಜಿನಿಯರ್‌ಗಳು ಮತ್ತು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಅನ್ನು ಗುರಿಯಾಗಿಸಿ ಈ ಘಟನೆ ನಡೆದಿದೆ.
ಆರಂಭದಲ್ಲಿ, ದಾಳಿಯ ಸ್ವರೂಪದ ಸುತ್ತ ಗೊಂದಲವಿತ್ತು, ಕೆಲವು ವರದಿಗಳು ಇದು ಬಸ್ ಅಪಘಾತ ಎಂದು ಸೂಚಿಸುತ್ತವೆ. ಆದಾಗ್ಯೂ, ನಂತರದ ತನಿಖೆಗಳು ಇದು ನಿಜವಾಗಿಯೂ ಭಯೋತ್ಪಾದಕ ದಾಳಿ ಎಂದು ತಿಳಿದುಬಂದಿದೆ. ಬಸ್ ಸ್ಫೋಟಗೊಂಡು ಕಂದಕಕ್ಕೆ ಬಿದ್ದಿತ್ತು.
ಪಾಕಿಸ್ತಾನದ ನೌಕಾಪಡೆಯ ವಾಯುನೆಲೆಯ ಮೇಲೆ ಶಸ್ತ್ರಸಜ್ಜಿತ ಯೋಧರು ದಾಳಿ ನಡೆಸ ಒಬ್ಬ ಅರೆಸೇನಾ ಯೋಧನನ್ನು ಕೊಂದ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ. ನೈಋತ್ಯ ಪಾಕಿಸ್ತಾನದ ಟರ್ಬತ್ ನೆಲೆಯ ಮೇಲೆ ಸೋಮವಾರದ ದಾಳಿಯು ಕಳೆದ ವಾರದಲ್ಲಿ ಮಿಲಿಟರಿ ಸೌಲಭ್ಯದ ಮೇಲೆ ಜನಾಂಗೀಯ ಬಲೂಚ್ ಹೋರಾಟಗಾರರು ನಡೆಸಿದ ಎರಡನೇ ದಾಳಿಯಾಗಿದೆ.
ಪಾಕಿಸ್ತಾನದ ನೌಕಾಪಡೆಯ ವಕ್ತಾರರು ಐವರು ದಾಳಿಕೋರರು ನೆಲೆಯೊಳಗೆ ನುಗ್ಗಲು ಪ್ರಯತ್ನಿಸಿದಾಗ ಹತ್ಯೆಗೀಡಾಗಿದ್ದಾರೆ ಎಂದು ಹೇಳಿದರು. ಒಬ್ಬ ಅರೆಸೇನಾ ಯೋಧ ಕೂಡ ಸಾವಿಗೀಡಾಗಿದ್ದಾರೆ ಎಂದು ಸೇನಾ ಹೇಳಿಕೆ ತಿಳಿಸಿದೆ.