ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಉಡುಪಿನಗರಸಭೆಯ ಎದುರು ಬಿಜೆಪಿಯ ಹಾಗೂ ಶಾಸಕರ ಪ್ರತಿಭಟನೆ ಬೇಲಿಯೇ ಎದ್ದು ಹೊಲ ಮೈದಂತೆ-ಸುರೇಶ್ ಶೆಟ್ಟಿ ಬನ್ನಂಜೆ ಗೇಲಿ

ಉಡುಪಿ:ಉಡುಪಿಯಲ್ಲಿ ನಗರಸಭೆಯ ವಿರುದ್ಧ ಬಿಜೆಪಿ ನಾಯಕರಾರು ಉಡುಪಿಯ ಶಾಸಕರು ಪ್ರತಿಭಟನೆಯನ್ನು ನಡೆ ಸಿದ್ದು ಯಾವ ಕಾರಣಕ್ಕಾಗಿ ಎಂಬುದು ಉಡುಪಿಯ ಜನರಿಗೆ ನಿಗೂಢವಾಗಿದೆ ಉಡುಪಿ ನಗರಸಭೆಯ ಆಡಳಿತವು ಬಿಜೆಪಿಯ ನಾಯಕತ್ವದಲ್ಲಿ ಬಹುಮತ ಪಡೆದಿದ್ದು 35 ನಗರಸಭಾ ಸದಸ್ಯರಲ್ಲಿ 32 ಮಂದಿ ಬಿಜೆಪಿಯ ಸದಸ್ಯರು ಆಯ್ಕೆಯಾಗಿದ್ದುಉಡುಪಿಯ ಶಾಸಕರು ಲೋಕಸಭಾ ಸದಸ್ಯರು ವಿಧಾನಪರಿಷತ್ ಸದಸ್ಯರು ಎಲ್ಲರೂ ಬಿಜೆಪಿಯವರೇ ಆಗಿದ್ದು ಈ ಪ್ರತಿಭಟನೆ ಎಂಬುದು ಉಡುಪಿಯ ಜನರನ್ನು ಮೋಸಗೊಳಿಸುವ ಬಿಜೆಪಿ ಶಾಸಕರ ಯತ್ನ ಉಡುಪಿ ಜಿಲ್ಲೆಯ ನಿಷ್ಠಾವಂತ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿಗಳು ಹಾಗೂ ಪ್ರಾಮಾಣಿಕ ಉಡುಪಿ ನಗರಸಭೆ ಪೌರಾಯುಕ್ತರು ಅವರನ್ನು ವಿರೋಧಿಸುವ ಪ್ರಯತ್ನವನ್ನು ಈ ಬಿಜೆಪಿ ನಾಯಕರಾರು ಹಾಗೂ ಶಾಸಕರು ನಿರಂತರವಾಗಿ ಮಾಡುತ್ತಲೇ ಇದ್ದಾರೆ ಕುಡಿಯುವ ನೀರಿನ ಬೆಲೆಯನ್ನು ಬಿಜೆಪಿಯ ಆಡಳಿತವೇ ಏರಿಸಿ ಈಗ ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ.

ಉಡುಪಿ ನಗರಸಭೆಯ ಭ್ರಷ್ಟಾಚಾರಕ್ಕೆ ಈ ಬಿಜೆಪಿಯ ನಾಯಕರೇ ಹೊಣೆ ಉಡುಪಿಯ ಶಾಸಕರು ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಪಕ್ಷವನ್ನು ಹಾಗೂ ಸ್ವಚ್ಛ ಆಡಳಿತವನ್ನು ಮಾಡುತ್ತಿರುವ ನಗರಸಭೆಯ ಆಡಳಿತಾಧಿಕಾರಿಯನ್ನು ಹಾಗೂ ಪೌರಾಯುಕ್ತರನ್ನು ದೂಷಿಸುವುದು ಎಷ್ಟರ ಮಟ್ಟಿಗೆ ಸರಿ ನಗರಸಭೆಯ ಒಳಗೆ ಇರುವ ಕೆಲವು ಅಧಿಕಾರಿಗಳು ರಾಜ್ಯ ಬಿಜೆಪಿ ಆಡಳಿತ ಇರುವಾಗ ಉಡುಪಿಯ ಬಿಜೆಪಿ ಶಾಸಕರೇ ನೇಮಿಸಲ್ಪಟ್ಟ ಅಧಿಕಾರಿಗಳೇ ಇಲ್ಲಿ ಇದ್ದಾರೆ೦ಬುದನ್ನು ಉಡುಪಿಯ ಈಗಿನ ಶಾಸಕರು ಅರಿತುಕೊಂಡರೆ ಒಳಿತು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ

No Comments

Leave A Comment