ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಬ್ರಹ್ಮಾವರ : ಫೋಟೋಗ್ರಾಫರ್ ಗಣೇಶ್ ಶೆಟ್ಟಿ ನಿಧನ
ಬ್ರಹ್ಮಾವರ : ಡಿ.31, ಹಾವಂಜೆ ಗ್ರಾಮದ ಕೀಳಂಜೆಯ ನಿವಾಸಿ, ಉಡುಪಿ ಕಾಂಗ್ರೆಸ್ ಮುಖಂಡ ಜಯಶೆಟ್ಟಿ ಬನ್ನಂಜೆ ಸಹೋದರಾದ ಗಣೇಶ್ ಶೆಟ್ಟಿ(46) ಕೀಳಂಜೆಯವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಮೃತರು ಪತ್ನಿ ಮತ್ತು ರಾಷ್ಟ್ರೀಯ ಕರಾಟೆ ಪ್ರಶಸ್ತಿ ಪುರಸ್ಕೃತೆಯಾದ ರಿಯಾ ಜಿ. ಶೆಟ್ಟಿಯವರನ್ನು ಅಗಲಿದ್ದಾರೆ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಶ್ರೀಯುತರು ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು.
ಬನ್ನಂಜೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ಕಾರ್ಯಕರ್ತರಾಗಿ ಗಣೇಶ್ ಶೆಟ್ಟಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.