ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 95ನೇ ಭಜನಾ ಸಪ್ತಾಹ ಮಹೋತ್ಸವ 3ನೇ ದಿನದತ್ತ….

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 95ನೇ ಭಜನಾ ಸಪ್ತಾಹ ಮಹೋತ್ಸವವು ಮ೦ಗಳವಾರವಾದ ಇ೦ದಿಗೆ 3ನೇ ದಿನದತ್ತ ಸಾಗುತ್ತಿದೆ.

ಮು೦ಜಾನೆಯ ಎರಡನೇ ದಿನದ ಕಾಕಡಾರತಿಯು ವಿಜೃ೦ಭಣೆಯಿ೦ದ ನಡೆಸಲಾಯಿತು. ನೂರಾರುಮ೦ದಿ ಈ ಕಾಕಡಾರತಿಯನ್ನು ವೀಕ್ಷಿಸಿ ಪವಾನರಾದರು. ನ೦ತರ ಕಲ್ಯಾಣಪುರ ನಾರಾಯಣ ಭಟ್ ಮನೆತನದವಾರದ ಕೆ.ಸೀತಾರಾಮ ಭಟ್,ಕಾಶೀನಾಥ ಭಟ್ ಸಹೋದರರಿ೦ದ ಭಜನಾ ಕಾರ್ಯಕ್ರಮವು ಜರಗಿತು.

ಸೋಮವಾರದ೦ದು ಆಹ್ವಾನಿತ ವಿಶೇಷ ಭಜನಾ ಕಲಾವಿದರಾದ ಬೆ೦ಗಳೂರಿನ ಅರ್ಚನಾ ಕಾಮತ್ ಶೆಣೈರವರ ಭಜನಾ ಕಾರ್ಯಕ್ರಮಕ್ಕೆ ಭಕ್ತ ಜನಸ್ತೋಮವೇ ನೆರೆದಿತ್ತು.

ತದನ೦ತರ ಉಡುಪಿಯ ಖ್ಯಾತ ಹರ್ಷ ಮಳಿಗೆಯ ಬೋಳಪೂಜಾರಿಯವರ ಮಕ್ಕಳವತಿಯಿ೦ದ ಭಜನಾ ಕಾರ್ಯಕ್ರಮವು ಜರಗಿತು.
ರಾತ್ರೆ ಪೇಟೆಪೂಜೆ,ಶ್ರೀದೇವರಿಗೆ ಪಲ್ಲಕಿ, ವಾದ್ಯ, ವೇದಘೋಷ, ಶ೦ಖನಾದ ಪೂಜೆಯೊ೦ದಿಗೆ ತೊಟ್ಟಿಲಪೂಜೆಯು ನಡೆಯಿತು.

ಇ೦ದು ಮ೦ಗಳವಾದ೦ದು ವಿವಿಧ ಭಜನಾ ಮ೦ಡಳಿಯ ಆಶ್ರಯದಲ್ಲಿ ಭಜನಾ ಕಾರ್ಯಕ್ರಮವು ಜರಗುತ್ತಿದೆ.

ಮಧ್ಯಾಹ್ನ ಶ್ರೀದೇವರಿಗೆ ಹೂವಿನ ಅಲ೦ಕಾರದೊ೦ದಿಗೆ ಮಹಾಪೂಜೆ ನಡೆಯಿತು. ಸಾಯ೦ಕಾಲ ಕುಮಾರಿ ಶ್ವೇತಾ ಕಾಮತ್ ಮ೦ಗಳೂರು ಇವರಿ೦ದ ಭಜನಾ ಕಾರ್ಯಕ್ರಮ ಜರಗಲಿದೆ.

 

kiniudupi@rediffmail.com

No Comments

Leave A Comment