ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ದುಬೈನಲ್ಲಿ ಜಗಳ ಆದ ಬಳಿಕ ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ? ಅಸಲಿ ವಿಷಯ ಏನು?

ನಟಿ ಪೂಜಾ ಹೆಗ್ಡೆ (Pooja Hegde) ಅವರಿಗೆ ದುಬೈನಲ್ಲಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಸುದ್ದಿ ಹರಡಿದೆ. ಖಾಸಗಿ ಕಾರ್ಯಕ್ರಮದ ಸಲುವಾಗಿ ದುಬೈಗೆ (Dubai) ತೆರಳಿದ್ದ ಅವರು ಅಲ್ಲಿ ಜಗಳ ಮಾಡಿಕೊಂಡಿದ್ದಾರೆ. ಆ ಘಟನೆ ಬಳಿಕ ಅವರಿಗೆ ಕೊಲೆ ಬೆದರಿಕೆ (Death Threat) ಹಾಕಲಾಗಿದೆ ಎಂದು ಪಾಪರಾಜಿ ಸೋಶಿಯಲ್​ ಮೀಡಿಯಾ ಖಾತೆಯೊಂದರಲ್ಲಿ ಪೋಸ್ಟ್​ ಮಾಡಲಾಗಿದೆ. ಇದನ್ನು ನೋಡಿ ಪೂಜಾ ಹೆಗ್ಡೆ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಮಾಧ್ಯಮಗಳಿಗೆ ನಟಿಯ ಆಪ್ತರು ಹೇಳಿಕೆ ನೀಡಿದ್ದಾರೆ. ಆ ಬಳಿಕ ಪೂಜಾ ಹೆಗ್ಡೆ ಫ್ಯಾನ್ಸ್​ ನಿಟ್ಟುಸಿರು ಬಿಟ್ಟಿದ್ದಾರೆ.

ಪೂಜಾ ಹೆಗ್ಡೆ ಅವರಿಗೆ ಭಾರತದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲಿ ಕೂಡ ಅಭಿಮಾನಿಗಳು ಇದ್ದಾರೆ. ಭಾರತದ ಸಿನಿಮಾಗಳು ದುಬೈನಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತವೆ. ಹಾಗಾಗಿ, ಇಂಡಿಯಾದ ಅನೇಕ ಸೆಲೆಬ್ರಿಟಿಗಳನ್ನು ಅಲ್ಲಿಗೆ ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಕ್ಲಬ್​ವೊಂದರ ಉದ್ಘಾಟನೆ ಸಲುವಾಗಿ ಪೂಜಾ ಹೆಗ್ಡೆ ಅವರು ದುಬೈಗೆ ತೆರಳಿದ್ದರು ಎನ್ನಲಾಗಿದೆ.

ಕ್ಲಬ್​ ಉದ್ಘಾಟನೆಗೆ ತೆರಳಿದ್ದ ವೇಳೆ ಪೂಜಾ ಹೆಗ್ಡೆ ಜಗಳ ಮಾಡಿಕೊಂಡರು ಎಂಬ ಗಾಳಿ ಸುದ್ದಿ ಹರಡಿತು. ಜಗಳದ ಬಳಿಕ ಅವರಿಗೆ ಜೀವ ಬೆದರಿಕೆ ಹಾಕಲಾಯಿತು ಎಂಬ ವಿಷಯ ಕೇಳಿ ಅಭಿಮಾನಿಗಳು ಆಂತಕ ವ್ಯಕ್ತಪಡಿಸಿದರು. ‘ದಯವಿಟ್ಟು ನೀವು ಬೇಗ ಭಾರತಕ್ಕೆ ವಾಪಸ್​ ಬನ್ನಿ’ ಎಂದು ಅನೇಕರು ಕಮೆಂಟ್​ ಮಾಡಿದರು. ಆದರೆ ಕೊಲೆ ಬೆದರಿಕೆಯ ಸುದ್ದಿ ನಿಜವಲ್ಲ ಎಂಬುದು ನಂತರ ಬಹಿರಂಗ ಆಯಿತು.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಇತ್ತೀಚೆಗೆ ಪೂಜಾ ಹೆಗ್ಡೆ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಿಕ್ಕಿಲ್ಲ. ಅವರು ನಟಿಸಿದ ಸಿನಿಮಾಗಳು ಸಾಲು ಸಾಲು ಸೋಲು ಕಂಡಿವೆ. ಹಾಗಿದ್ದರೂ ಕೂಡ ಅವರಿಗೆ ಬರುವ ಅವಕಾಶಗಳು ಕಡಿಮೆ ಆಗಿಲ್ಲ. ಬಾಲಿವುಡ್​ ನಟ ಶಾಹಿದ್​ ಕಪೂರ್​ ಜೊತೆ ಪೂಜಾ ಹೆಗ್ಡೆ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. 2024ರ ಅಕ್ಟೋಬರ್​ ತಿಂಗಳಲ್ಲಿ ಆ ಸಿನಿಮಾ ರಿಲೀಸ್​ ಆಗಲಿದೆ.

kiniudupi@rediffmail.com

No Comments

Leave A Comment