ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ: ಚಿಟ್ಪಾಡಿಯ” ರಾಮನಾಥಕೃಪ” ಪಡಿಯಾರ್ ಮನೆಗೆ ಗೋಕರ್ಣಶ್ರೀಗಳ ಭೇಟಿ…
ಉಡುಪಿ: ಉಡುಪಿಯ ಚಿಟ್ಪಾಡಿಯ” ರಾಮನಾಥಕೃಪ” ರಥಬೀದಿಯ ಖ್ಯಾತ ಪೂಜಾ ಸಾಮಾಗ್ರಿ ಮಳಿಗೆ ಗಣೇಶ್ ಪಡಿಯಾರ್ ಮನೆಗೆ ಡಿಸೆ೦ಬರ್ 7ರ ಗುರುವಾರದ೦ದು ಸಾಯಂಕಾಲ ಪರಮಪೂಜ್ಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧಿಪತಿ ಶ್ರೀಮದ್ ವಿದ್ಯಾಧೀಶತೀರ್ಥ ಸ್ವಾಮೀಜಿಯವರು ಭೇಟಿ ನೀಡಿದರು.
ಮನೆಗೆ ಪ್ರಥಮ ಬಾರಿ ಆಗಮಿಸಿದ್ದ ಶ್ರೀಗಳವರನ್ನು ಪೂರ್ಣಕು೦ಭದೊ೦ದಿಗೆ ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ನ೦ತರ ಶ್ರೀಗಳವರಿಗೆ ಪಾದಪೂಜೆಯನ್ನು ಹಾಗೂ ಫಲವಸ್ತುಗಳ ಸಮರ್ಪಿಸಲಾಯಿತು.ನ೦ತರ ಶ್ರೀಗಳವರು ಮನೆಯ ಎಲ್ಲಾ ಸದಸ್ಯರಿಗೆ ಫಲಮ೦ತ್ರಾಕ್ಷತೆಯನ್ನು ನೀಡಿ ಶುಭಹಾರೈಸಿದರು.