``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

IPL 2024: ಆರ್‌ಸಿಬಿ ತೊರೆದು ಸನ್‌ರೈಸರ್ಸ್ ಹೈದರಾಬಾದ್ ಸೇರಿಕೊಂಡ ಪ್ರಮುಖ ಆಲ್‌ರೌಂಡರ್

ಮುಂಬೈ: ಎಡಗೈ ಸ್ಪಿನ್ನರ್ ಶಹಬಾಜ್ ಅಹ್ಮದ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಆಟಗಾರರ ವಿನಿಮಯದ ಅಡಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದೇ ವೇಳೆ, ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಮಯಾಂಕ್ ದಾಗರ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಬೆಂಗಳೂರು ತಂಡದಲ್ಲಿ ಆಡಲಿದ್ದಾರೆ.

ಶಹಬಾಜ್ ಅಹ್ಮದ್ ಅವರನ್ನು ಸದ್ಯದ ಹರಾಜಿನ ಬೆಲೆಯಲ್ಲಿಯೇ ಎಸ್‌ಆರ್‌ಎಚ್‌ಗೆ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಭಾನುವಾರ ಬಿಡುಗಡೆಯಾದ ಐಪಿಎಲ್ ಹೇಳಿಕೆ ತಿಳಿಸಿದೆ.

2022ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ 2.40 ಕೋಟಿ ಕೊಟ್ಟು ಶಹಬಾಜ್ ಅವರನ್ನು ತಂಡಕ್ಕೆ ಮರು ಸೇರ್ಪಡೆ ಮಾಡಿಕೊಂಡಿತ್ತು. ಐಪಿಎಲ್ 2023ರ ಹರಾಜಿನ ಸಮಯದಲ್ಲಿ 1.8 ಕೋಟಿ ನೀಡಿ ಮಯಾಂಕ್ ಡಾಗರ್ ರನ್ನು ಸನ್‌ರೈಸರ್ಸ್ ಹೈದರಾಬಾದ್ ಖರೀದಿ ಮಾಡಿತ್ತು.

ಶಹಬಾಜ್ ಇಲ್ಲಿಯವರೆಗೆ 39 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಐಪಿಎಲ್‌ನಲ್ಲಿ ಇದುವರೆಗೂ  14 ವಿಕೆಟ್‌ ವಿಕೆಟ್ ಪಡೆದುಕೊಂಡಿದ್ದಾರೆ. ಪಂದ್ಯವೊಂದರಲ್ಲಿ 7 ರನ್ ನೀಡಿ 3 ವಿಕೆಟ್ ಪಡೆದಿರುವುದು ಅವರ ಉತ್ತಮ ಸಾಧನೆಯಾಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಗಿನ ಬಿಡ್ಡಿಂಗ್ ಹಣಾಹಣಿಯ ನಂತರ ಕಳೆದ ವರ್ಷದ ಮೆಗಾ ಹರಾಜಿನಲ್ಲಿ 2.4 ಕೋಟಿ ರೂ.ಗಳಿಗೆ ಶಹಬಾಜ್ ಅವರನ್ನು ಬೆಂಗಳೂರು ಫ್ರಾಂಚೈಸಿ ಖರೀದಿಸಿತ್ತು. 2020ರ ಐಪಿಎಲ್ ಆವೃತ್ತಿಯಲ್ಲಿ ಪಶ್ಚಿಮ ಬಂಗಾಳದ ಸ್ಪಿನ್ನರ್ ಶಹಬಾಜ್ ಅವರನ್ನು ಆರ್‌ಸಿಬಿ ಮೊದಲು ಖರೀದಿ ಮಾಡಿತ್ತು. ಈ ಮಧ್ಯೆ, ಮಯಾಂಕ್ ದಾಗರ್ ಅವರು ಕೂಡ ಸದ್ಯದ ಹರಾಜಿನ ಬೆಲೆಯಲ್ಲಿಯೇ ಎಸ್‌ಆರ್‌ಎಚ್‌ ತಂಡದಿಂದ ಆರ್‌ಸಿಬಿಗೆ ಸೇರ್ಪಡೆಯಾಗಿದ್ದಾರೆ.

ಬಲಗೈ ಆಲ್ ರೌಂಡರ್ ಆಗಿರುವ ಮಯಾಂಕ್ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ಪರ ಕೂಡ ಆಡಿದ್ದಾರೆ. 2023ರ ಐಪಿಎಲ್ ಋತುವಿನಲ್ಲಿ, ಅವರು ಮೂರು ಪಂದ್ಯಗಳನ್ನು ಆಡಿದರು ಮತ್ತು ಒಂದು ವಿಕೆಟ್ ಪಡೆದರು.

No Comments

Leave A Comment