ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಲಿದೆ. ಮತ್ತು 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ....
ಬಾಲ್ ಕ್ಯಾಚ್ ಹಿಡಿಯುವಾಗ ವಿದ್ಯುತ್ ಸ್ಪರ್ಶ: ಬಾಲಕ ಮೃತ್ಯು
ಧಾರವಾಡ:ನ 25: ಗೆಳೆಯರೊಂದಿಗೆ ಸೇರಿ ಕ್ರಿಕೆಟ್ ಆಡುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಮೃತಪಟ್ಟ ಘಟನೆ ಧಾರವಾಡ ನಗರದ ಸಿದ್ದರಾಮ ಕಾಲೋನಿಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಸ್ಥಳೀಯ ನಿವಾಸಿ ಅಶೋಕ ಶಿನ್ನೂರ ಅವರ ಪುತ್ರ, ರಾಜೀವ ಗಾಂಧಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಶ್ರೇಯಸ್ ಶಿನ್ನೂರ(16 ವರ್ಷ) ಎಂದು ಗುರುತಿಸಲಾಗಿದೆ. ಸ್ನೇಹಿತನ ಪ್ರಾಣವನ್ನು ಉಳಿಸಲು ಯತ್ನಿಸಿದ ಮತ್ತೋರ್ವ ಬಾಲಕನಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.
ಶ್ರೇಯಸ್ ಸಂಜೆಯ ಹೊತ್ತು ಕಾಲೊನಿಯ ಇತರ ಗೆಳೆಯರೊಂದಿಗೆ ಸೇರಿ ಮನೆಯ ಟೆರೇಸ್ ಮೇಲೆ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿದ್ದ. ಹೀಗೆ ಕ್ರಿಕೆಟ್ ಆಡುತ್ತಿದ್ದ ಶ್ರೇಯಸ್ ಕ್ಯಾಚ್ ಹಿಡಿಯಲೆಂದು ಪ್ರಯತ್ನಿಸುವ ವೇಳೆ ವಿದ್ಯುತ್ ತಂತಿ ತಗುಲಿ ಘಟನೆ ಸಂಭವಿಸಿದೆ.
ದುರ್ಘಟನೆಯ ಬಗ್ಗೆ ಮಾತನಾಡಿದ ಮೃತ ಶ್ರೇಯಸ್ ತಂದೆ ಅಶೋಕ ಶಿನ್ನೂರ, ಸಂಜೆ 5ಕ್ಕೆ ಆತ ಶಾಲೆಯಿಂದ ಬಂದಿದ್ದು ಸ್ವಲ್ಪ ಹೊತ್ತು ಮನೆಯಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತಿದ್ದ. ಆಗ ಆಟ ಆಡಲು ಗೆಳೆಯ ಕರೆದಾಗ ಬಾಲ್ ತೆಗೆದುಕೊಂಡು ಹೊರಗೆ ಹೋಗಿದ್ದ. ನಿತ್ಯವೂ ಸಂಜೆ ಅವರು ಆಟ ಆಡುತ್ತಿದ್ದರು. ಆತ ಆಡಲು ಹೋದ ಹತ್ತೇ ನಿಮಿಷದಲ್ಲಿ ಆತ ಬಿದ್ದಿದ್ದಾನೆಂದು ಜನ ಕರೆದರು.
ಓಡಿ ಹೋಗಿ ನೋಡಿದಾಗ ಆತನಿಗೆ ವಿದ್ಯುತ್ ತಗುಲಿತ್ತು. ಮನೆ ಬಳಿ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಗೆಳೆಯ ಎಸೆದ ಬಾಲು ಹಿಡಿಯಲು ಹೋದಾಗ ವಿದ್ಯುತ್ ತಗುಲಿದೆ. ಕೈಯಿಂದ ಹೊಟ್ಟೆಯವರೆಗೆ ವಿದ್ಯುತ್ ಹೊಡೆದಿತ್ತು. ತಕ್ಷಣ ಆಸ್ಪತ್ರೆಗೆ ತಂದೆವು. ಆದರೆ ಆತನ ಬದುಕಿ ಉಳಿಯಲಿಲ್ಲ. ಇದ್ದ ಒಬ್ಬನೇ ಒಬ್ಬ ಮಗನನ್ನ ನಾನು ಕಳೆದುಕೊಂಡಿದ್ದೇನೆ ಎಂದು ನೋವು ತೋಡಿಕೊಂಡಿದ್ದಾರೆ.