ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಮಂಗಳೂರು: ‘ಸಹಕಾರಿ ರತ್ನ’ ಪ್ರಶಸ್ತಿಗೆ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ಆಯ್ಕೆ

ಮಂಗಳೂರು:ನ,17. 2023ರ ‘ಸಹಕಾರಿ ರತ್ನ’ ಪ್ರಶಸ್ತಿಗೆ ದ.ಕ ಜಿಲ್ಲೆಯಿಂದ ಎಂಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಅನಿಲ್ ಲೋಬೋ ಆಯ್ಕೆಯಾಗಿದ್ದಾರೆ.

“ದಕ್ಷಿಣ ಕನ್ನಡದಲ್ಲಿ ಅನಿಲ್ ಲೋಬೋ ಅವರ ನಿಷ್ಠಾವಂತ ನಾಯಕತ್ವದ ಮೂಲಕ ಸಹಕಾರ ಚಳವಳಿ, ಸಹಕಾರಿ ವ್ಯವಸ್ಥೆಯ ಮೂಲಕ ಜನರನ್ನು ತಲುಪಿದ್ದು, ಈ ಹಿನ್ನಲೆ ಅವರನ್ನು ಪ್ರಶಸ್ತಿಗೆ ಅರ್ಹರನ್ನಾಗಿ ಮಾಡಿದೆ” ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ನಡೆಯುವ ಅಖಿಲ ಭಾರತ ಸಹಕಾರ ಚಳವಳಿ ಸಪ್ತಾಹದ 70ನೇ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.

ಅನಿಲ್ ಲೋಬೋ ಅವರು ಸಹಕಾರ ಚಳವಳಿಯಲ್ಲಿನ ನಾಯಕತ್ವ ಮತ್ತು ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ MCC ಬ್ಯಾಂಕ್ ತನ್ನ ಲಾಭ ಮತ್ತು ವಿಸ್ತರಣೆಯಲ್ಲಿ ಏರುಗತಿಯ ಬೆಳವಣಿಗೆಯನ್ನು ಕಂಡಿದೆ. ಇವರು ಪರಿಚಯಿಸಿದ ವಿವಿಧ ಗ್ರಾಹಕ ಸ್ನೇಹಿ ಕಾರ್ಯಕ್ರಮಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

No Comments

Leave A Comment