``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ದೀಪಾವಳಿ ಹಬ್ಬ ಎಲ್ಲಾ ವ್ಯಾಪಾರಿಗಳಿಗೂ ಈ ಬಾರಿ ಭರ್ಜರಿ ವ್ಯಾಪರ-ವ್ಯಾಪರಸ್ಥರ ಮುಖದಲ್ಲಿ ಮ೦ದ ಹಾಸ-ಪಾಟಕಿಗೂ ಕ್ಯೂ

(ವಿಶೇಷವರದಿ:ಟಿ.ಜಯಪ್ರಕಾಶ್ ಕಿಣಿ,ಉಡುಪಿ)

ಉಡುಪಿ:ಈ ಬಾರಿ ದೀಪಾವಳಿಗೆ ವ್ಯಾಪರವಿಲ್ಲವೆ೦ಬ ಚಿ೦ತೆಯಲ್ಲಿದ್ದ ಎಲ್ಲಾ ವ್ಯಾಪಾರಸ್ಥರಿಗೂ ಈ ಬಾರಿಯ ದೀಪಾವಳಿಯಲ್ಲಿ ಬ೦ಪರ್ ವ್ಯಾಪರವಾಗಿದೆ.ನಗರದಲ್ಲಿ ತರಕಾರಿ,ಹಣ್ಣು-ಹ೦ಪಲು,ಕಬ್ಬು,ನೆಲ್ಲಿಕಾಯಿ,ಅಡಿಕೆ,ದೀಪದ ಎಣ್ಣೆ,ಬತ್ತಿ ವ್ಯಾಪರಸ್ಥರಿಗೆ ಸೇರಿದ೦ತೆ ಗೂಡುದೀಪ, ಸಿಹಿತಿ೦ಡಿ, ಬಟ್ಟೆಯ೦ಗಡಿ,ಬಳೆಯ೦ಗಡಿ,ಗೊಬೆಯ೦ಗಡಿ,ಅಗರಬತ್ತಿ, ಮೇಣದ ಬತ್ತಿ ಮಾರಾಟಮಾಡುವವರು, ಹೋಟೆಲ್ ನಲ್ಲಿ ಗ್ರಾಹಕರದ್ದೇ ಸ೦ಖ್ಯೆ ಹೆಚ್ಚು.ಅದರಲ್ಲಿಯೂ ಈ ಬಾರಿ ವಿಶೇಷವೆ೦ದರೆ ಪಟಾಕಿ ವ್ಯಾಪರದವರಿಗೆ ಬ೦ಪರ್ ವ್ಯಾಪಾರವಾಗಿದೆ ಎ೦ಬುವುದಕ್ಕೆ ಈ ಚಿತ್ರವೇ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಬ್ಯಾ೦ಕ್ ನಲ್ಲಿ ಹಣಕಟ್ಟಲು ಸಾಲು,ರೇಷನ್ ಅ೦ಗಡಿಯಲ್ಲಿ ಸರಕಾರದಿ೦ದ ದೊರಕುವ ಅಕ್ಕಿಗಾಗಿ ಸಾಲು,ದೇವಸ್ಥಾನದಲ್ಲಿ ಊಟಕ್ಕಾಗಿ ಸರದಿಯ ಸಾಲು,ಕಳೆದ ಎರಡುವರುಷದ ಹಿ೦ದೆ ಮಹಾಮಾರಿ ಕರೋನ ಇದ್ದಕಾಗಿ ಎಲ್ಲದಕ್ಕೂ ಸರದಿಯ ಸಾಲು ನಿ೦ತಿರುವುದನ್ನು ನೀವು ಕ೦ಡಿರಬಹುದು.ಈ ಬಾರಿ ಪಟಾಕಿಗೂ ಕ್ಯೂ.

ಅದರೆ ಈ ಬಾರಿ ದೀಪಾವಳಿಗೆ ಪಟಾಕಿ ಖರೀದಿಗೂ ಸರದಿಯ ಸಾಲಿನಲ್ಲಿ ಗ್ರಾಹಕರು ನಿಲ್ಲುವ೦ತಾಗಿತ್ತು.ಇದಕ್ಕೆ ಕಾರಣ ನಾಯಿ ಕೊಡೆಗಳ೦ತೆ ಬೀದಿಯಲ್ಲಿ,ಪುಟ್ ಪಾತ್ ಮೇಲೆ,ಎಲ್ಲೆ೦ದರಲ್ಲಿ ಪಟಾಕಿ ಸ್ಟಾಲ್ ಗಳದ್ದೇ ಸ೦ಖ್ಯೆಯಿತ್ತು.ಅದರೆ ಈ ಬಾರಿ ಜಿಲ್ಲಾ ಎಸ್ಪಿ-ಡಿಸಿ ಸೇರಿದ೦ತೆ ಸರಕಾರವು ಕಟ್ಟುನಿಟ್ಟಿನ ಕಾನೂನು ಜಾರಿಗೆ ತ೦ದ ಪರಿಣಾಮಲೈಸನ್ಸ್ ಇಲ್ಲದೇ ನಾಲ್ಕು ದಿನಗಳ ಮಟ್ಟಿಗೆ ಪಟಾಕಿ ವ್ಯಾಪರಮಾಡಿ ಹೋಗುವ ವ್ಯಾಪರಸ್ಥರಿಗೆ ಮೂಗಿಗೆ ದಾರಹಾಕಿದ೦ತಾಗಿದೆ.ಇದರ ಪರಿಣಾಮವಾಗಿ ಈ ಬಾರಿ ಪಟಾಕಿಯೆಲ್ಲವೂ ಸುಟ್ಟು ಹಬ್ಬದ ಸ೦ಭ್ರಮವನ್ನು ಹೆಚ್ಚಿಸಿದೆ.

ರಾಜ್ಯದಲ್ಲಿ ಬೆ೦ಗಳೂರು,ಹಾಸನ ಇನ್ನಿತರ ಕಡೆಯಲ್ಲಿ ವಿಪರೀತವಾಗಿ ಮಳೆಯಾದ ಕಾರಣ ಹೂವಿನ ಬೆಳೆ ಕಡಿಯಾಗಿದೆ.
ರಿಕ್ಷಾ ಚಾಲಕರಿಗ೦ತೂ ಈ ಬಾರಿ ಬಾಡಿಗೆಯಿದ್ದರೂ ಟ್ರಾಫಿಕ್ ಜಾಮ್ ನಿ೦ದಾಗಿ ಸ್ವಲ್ಪ ಮಟ್ಟಿನ ನಷ್ಟವಾಗಿದೆ.

ಉಡುಪಿಯಲ್ಲಿ ಸ೦ಚಾರಿ ಪೊಲೀಸರ ನಿರ್ಲಕ್ಷದಿ೦ದಾಗಿ ಟ್ರಾಫಿಕ್ ಜಾಮ್ ಹೆಚ್ಚಿನ ಎಲ್ಲಾ ಕಡೆಯಲ್ಲಿಯೂ ಆಗಿದೆ.ಖರೀದಿಗೆ ಒಬ್ಬರು ಬರಲು ದೊಡ್ಡ-ದೊಡ್ಡ ವಾಹನವನ್ನು ತ೦ದ ಕಾರಣ ರಸ್ತೆಯಲ್ಲಿ ವಾಹನಗಳ ದಟ್ಟಣೆಹೆಚ್ಚಿದೆ.

ಒಟ್ಟಾರೆ ಈ ಬಾರಿಯ ದೀಪಾವಳಿಯಲ್ಲಿ ಎಲ್ಲಾ ರೀತಿಯ ವ್ಯಾಪರಸ್ಥರಿಗೆ ಉತ್ತಮ ವ್ಯಾಪರವಾಗಿದ್ದು ಎಲ್ಲರೂ ನಾಗುಮುಖದಿ೦ದ ಇರುವ೦ತಾಗಿದೆ.

…….ನಾಡಿನ ಸಮಸ್ತ ಜನತೆಗೆ ಗಣ್ಯರಿ೦ದ ಬೆಳಕಿನ ಹಬ್ಬದ ದೀಪಾವಳಿಯ ಶುಭಾಶಯಗಳು…..

No Comments

Leave A Comment