ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಉತ್ತರ ಪ್ರದೇಶ: ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದು 6 ಜನರ ಸಾವು, 27 ಮಂದಿಗೆ ಗಾಯ

ಗೋರಖ್‌ಪುರ: ಜಗದೀಶ್‌ಪುರ ಸಮೀಪದ ಗೋರಖ್‌ಪುರ-ಕುಶಿನಗರ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟ್ರಕ್‌ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿದ್ದಾರೆ. ಐದು ಆಂಬ್ಯುಲೆನ್ಸ್‌ಗಳ ಸಹಾಯದಿಂದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಇಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ. ಗೋರಖ್‌ಪುರದಿಂದ ಬರುತ್ತಿದ್ದ ಬಸ್ ಪ್ರಯಾಣಿಕರೊಂದಿಗೆ ಪರೌನಾ ಕಡೆಗೆ ಹೋಗುತ್ತಿತ್ತು ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ ಎಂದು ಕಂಟೋನ್ಮೆಂಟ್ ಪೊಲೀಸ್ ಸರ್ಕಲ್ ಆಫೀಸರ್  ಮನುಷ್ ಪರೀಕ್ ತಿಳಿಸಿದ್ದಾರೆ.

ಜಗದೀಶ್‌ಪುರದ ಮಲ್ಲಾಪುರ ಬಳಿ ಬಸ್‌ ಟೈರ್‌ ಪಂಕ್ಚರ್‌ ಆಗಿದ್ದು, ಚಾಲಕ ರಸ್ತೆ ಬದಿಯಲ್ಲಿ ಬಸ್ ನ್ನು ನಿಲ್ಲಿಸಿದ್ದಾರೆ. ಪ್ರಯಾಣಿಕರನ್ನು ಸಾಗಿಸಲು ಕಂಡಕ್ಟರ್‌ ಮತ್ತೊಂದು ಬಸ್‌ ಗೆ ಕರೆ ಮಾಡಿದ್ದಾರೆ. ಕೆಲವು ಪ್ರಯಾಣಿಕರು ಗೋರಖ್‌ಪುರದಿಂದ ಬಂದ ಮತ್ತೊಂದು ಬಸ್‌ಗೆ ಹತ್ತಿದ್ದರೆ, ಮತ್ತೆ ಕೆಲವರು ಬಸ್‌ ಹತ್ತಲು ಇಳಿಯುತ್ತಿದ್ದರು ಮತ್ತು ಅನೇಕ ಪ್ರಯಾಣಿಕರು ಎರಡು ಬಸ್‌ಗಳ ನಡುವೆ ನಿಂತಿರುವಾಗ ವೇಗವಾಗಿ ಬಂದ ಲಾರಿಯೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ. ಇದರ ಡಿಕ್ಕಿಯ ರಭಸಕ್ಕೆ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗೋರಖ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಗ್ರೋವರ್, ತಪ್ಪಿತಸ್ಥ ಚಾಲಕನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಡಿಕ್ಕಿ ಹೊಡೆದ ನಂತರ ಟ್ರಕ್ ಬಿಟ್ಟು ಚಾಲಕ ಬಿಟ್ಟು ಪರಾರಿಯಾಗಿದ್ದಾನೆ.

No Comments

Leave A Comment