ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
2008ರ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಕೊಲೆ ಪ್ರಕರಣ – ಐವರು ದೋಷಿ
ನವದೆಹಲಿ:ಅ.18 : 2008ರಲ್ಲಿ ನಡೆದ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ
ನ್ಯಾಯಾಲಯ ಲೂಟಿ ಹಾಗೂ ಮೋಕಾ ಕಾಯ್ದೆಯಡಿ ಐವರನ್ನು ದೋಷಿ ಎಂದು ತೀರ್ಪು ನೀಡಿದೆ.ಪ್ರಕರಣದಲ್ಲಿ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜಿತ್ ಮಲ್ಲಿಕ್ ಮತ್ತು ಅಕ್ಷಯ್ ಕುಮಾರ್ ಕೊಲೆ ಮತ್ತು ಲೂಟಿಯಲ್ಲಿ ಶಾಮೀಲಾಗಿದ್ದು ದೋಷಿ ಎಂದು ಕೋರ್ಟ್ ತಿಳಿಸಿದ್ದು, ಇವರಿಗೆ ನೆರವು ನೀಡಿದ 5ನೇ ಆರೋಪಿ ಅಜಯ್ ಸೇಥಿ ಕೂಡಾ ಆರೋಪಿ ಎಂದು ಹೇಳಿದೆ.
ಇನ್ನು 2008ರ ಸೆಪ್ಟೆಂಬರ್ 30ರಂದು ಹೆಡ್ ಲೈನ್ಸ್ ಟುಡೇ ಪತ್ರಕರ್ತೆ ಸೌಮ್ಯ (25) ಅವರು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದೆಹಲಿಯ ವಸಂತ್ ವಿಹಾರ್ ಬಳಿ ಹಣೆಗೆ ಗುಂಡಿಟ್ಟು ಕೊಲೆಗೈಯಲಾಗಿತ್ತು.