ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ತಮಿಳುನಾಡಿಗೆ 15 ದಿನ 3000 ಕ್ಯು.ನೀರು ಬಿಡಿ: ಮತ್ತೆ ಸಿಡಬ್ಲ್ಯೂಎಂಎ ಆದೇಶ, ಸುಪ್ರೀಂಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧಾರ!

ನವದೆಹಲಿ/ಬೆಂಗಳೂರು: ಅ.16ರಿಂದ 15 ದಿನಗಳ ಕಾಲ ತಮಿಳುನಾಡು ರಾಜ್ಯಕ್ಕೆ ನಿತ್ಯ 3000 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿದ್ದ ಆದೇಶವನ್ನು ಶುಕ್ರವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿದೆ.

ದೆಹಲಿಯಲ್ಲಿ ಶುಕ್ರವಾರ ನಡೆದ ಸಿಡಬ್ಲ್ಯೂಎಂಎ ಕಾವೇರಿಗೆ ಸಂಬಂಧಿಸಿದ ಪರಿಶೀಲನಾ ಸಭೆಯಲ್ಲಿ ಅ.16ರಿಂದ 31ರವರಗೆ ನಿತ್ಯ 3 ಸಾವಿರ ಕ್ಯುಸಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಲಾಗಿದೆ.

ಸಭೆ ಬಳಿಕ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಪ್ರತಿಕ್ರಿಯೆ ನೀಡಿ, ಸಂಕಷ್ಟ ಅಂಶ ಪರಿಗಣಿಸಿದರೆ ತಮಿಳುನಾಡಿನಲ್ಲಿ ಕುರುವೈ ಹಾಗೂ ಸಾಂಬಾ ಬೆಳೆಗೆ ಬೇಕಿರುವುದಕ್ಕಿಂತ ಹೆಚ್ಚು ನೀರು ಇದೆ. ಜೊತೆಗೆ, ತಮಿಳುನಾಡು ಅನುಕೂಲಕರ ಸ್ಥಿತಿಯಲ್ಲಿದೆ. ಈಶಾನ್ಯ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ, ಲಾಭ ಆಗುವುದು ತಮಿಳುನಾಡಿಗೆ. ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಶೇ 58ರಷ್ಟು ಮಾತ್ರ ನೀರಿದೆ. ಈಗಿನ ಸನ್ನಿವೇಶದಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯ. ಸಮಿತಿಯ ಶಿಫಾರಸನ್ನು ತಿರಸ್ಕರಿಸಬೇಕು’ ಎಂದು ಮನವಿ ಮಾಡಿದೆವು.

ಬ್ಯಾಕ್‌ಲಾಗ್‌ ನೀರು ಬಿಡಬೇಕು ಎಂದು ತಮಿಳುನಾಡು ಒತ್ತಾಯಿಸಿತು. ಒಂದು ಸಲ ನೀರು ಬಿಟ್ಟರೆ ಅದನ್ನು ವಾಪಸ್‌ ತರಲು ಆಗುವುದಿಲ್ಲ. ಹಿಂಗಾರಿನಲ್ಲಿ ಉತ್ತಮ ಮಳೆಯಾಗಿ ಒಳಹರಿವು ಜಾಸ್ತಿಯಾದರೆ ಬ್ಯಾಕ್‌ಲಾಗ್‌ ನೀರು ಬಿಡುತ್ತೇವೆ ಎಂಬುದಾಗಿ ಪ್ರಾಧಿಕಾರಕ್ಕೆ ತಿಳಿಸಿದ್ದೇವೆ’ ಎಂದರು.

ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಸಭೆಯಲ್ಲಿ ಒತ್ತಾಯಿಸಲಾಗಿದೆ. ಮೇಕೆದಾಟು ವಿಷಯದ ಚರ್ಚಿಸಲು ಪ್ರತ್ಯೇಕ ಸಭೆ ಕರೆಯುವಂತೆ ಮನವಿ ಮಾಡಿದ್ದೇವೆ’ ಎಂದು ಹೇಳಿದರು.

No Comments

Leave A Comment