ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ತಮಿಳುನಾಡು: ಪಟಾಕಿ ಗೋದಾಮಿನಲ್ಲಿ ಸ್ಫೋಟ, 11 ಜನರ ಸಾವು, 12 ಮಂದಿಗೆ ಗಾಯ, ಮಾಲೀಕ ಸೇರಿ ಇಬ್ಬರ ಬಂಧನ
ಅರಿಯಲೂರು: ಕರ್ನಾಟಕದ ಗಡಿ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ 14 ಮಂದಿ ಕಾರ್ಮಿಕರು ಮೃತಪಟ್ಟ ಬೆನ್ನಲ್ಲೇ ತಮಿಳುನಾಡಿನಲ್ಲಿಯೂ ಅಂತಹುದೇ ಘಟನೆ ನಡೆದಿದ್ದು, 11 ಜನರು ದುರ್ಮರಣ ಹೊಂದಿದ್ದಾರೆ.
ಹೌದು. ಅರಿಯಲೂರು ಜಿಲ್ಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ 11 ಜನರು ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿದ್ದಾರೆ.
ಆರಂಭದಲ್ಲಿ ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಈಗ ಅದು ಹೆಚ್ಚಾಗಿದ್ದು, ಸಾವು ನೋವಿನ ಬಗ್ಗೆ ಜಿಲ್ಲಾಧಿಕಾರಿ ಖಚಿತ ಮಾಡಿದ್ದಾರೆ. ವೀರಗಳೂರು ಪಟ್ಟಣದಲ್ಲಿ ನಡೆದ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಅರಿಯಲೂರು ಜಿಲ್ಲಾಧಿಕಾರಿ ಅನ್ನೆ ಮೇರಿ ಸ್ವರ್ಣ ತಿಳಿಸಿದ್ದಾರೆ.
ಗಾಯಗೊಂಡ 12 ಜನರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಪಟಾಕಿ ಗೋದಾಮಿನ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಸ್ವರ್ಣಾ ತಿಳಿಸಿದ್ದಾರೆ.