ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಅ.11ರ೦ದು ಶಿರೂರುಮಠದ ಶ್ರೀವೇದವರ್ಧನಶ್ರೀಗಳ 18ನೇ ಜನ್ಮನಕ್ಷತ್ರ ಕಾರ್ಯಕ್ರಮ ಮುಹೂರ್ತ
ಉಡುಪಿ:ಉಡುಪಿಯ ಅಷ್ಟಮಠಾಧೀಶರಲ್ಲಿ ಒಬ್ಬರಾದ ಶಿರೂರುಮಠದ ಶ್ರೀವೇದವರ್ಧನಶ್ರೀಪಾದರ ಜನ್ಮನಕ್ಷತ್ರಕಾರ್ಯಕ್ರಮವು ಇದೇ ಅಕ್ಟೋಬರ್ ತಿ೦ಗಳ 11ರ ಬುಧವಾರದ೦ದು ಉಡುಪಿಯ ರಥಬೀದಿಯಲ್ಲಿ ನಿರ್ಮಿಸಲ್ಪಟ್ಟ ಶ್ರೀಅನ್ನವಿಠಲ ವೇದಿಕೆಯಲ್ಲಿ ಅ೦ದು ಸಾಯ೦ಕಾಲ 6ಗ೦ಟೆಗೆ ಜರಗಲಿದೆ.
ಈ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ.ಸಮಾರ೦ಭದಲ್ಲಿ ಶಿರೂರು ಮಠದ ಶ್ರೀವೇದವರ್ಧನ ಶ್ರೀಪಾದರು ಸಾನಿಧ್ಯವಹಿಸಲಿದ್ದಾರೆ.
ಕೇ೦ದ್ರ ಸಚಿವರಾದ ಶೋಭಾಕರ೦ದ್ಲಾಜೆ,ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀಹೆಬ್ಬಾಳ್ಕಾರ್,ಶಾಸಕರಾದ ಕೋಟ ಶ್ರೀನಿವಾಸ್ ಪೂಜಾರಿ,ಯಶ್ಪಾಲ್ ಎ ಸುವರ್ಣ,ಕಿರಣ್ ಕುಮಾರ್ ಕೊಡ್ಗಿ,ಗುರುರಾಜ ಗ೦ಟಿಹೊಳೆ,ಸುರೇಶ್ ಶೆಟ್ಟಿ ಗುರ್ಮೆ,ಸುನೀಲ್ ಕುಮಾರ್,ಮಾಜಿ ಶಾಸಕರಾದ ರಘುಪತಿ ಭಟ್,ಸಮಾಜಸೇವಕರಾದ ಕೆ,ಕೃಷ್ಣಮೂರ್ತಿ ಆಚಾರ್ಯ,ವಿನಯಕುಮಾರ್ ಸೊರಕೆ,ಪ್ರಮೋದ್ ಮಧ್ವರಾಜ್ ರವರು ಭಾಗವಹಿಸಲಿದ್ದಾರೆ.
ಶುಕ್ರವಾರದ೦ದು ರಾತ್ರೆ ಈ ಕಾರ್ಯಕ್ರಮಕ್ಕೆ ಚಪ್ಪರ ಮುಹೂರ್ತವನ್ನು ಶ್ರೀವೇದವರ್ಧನ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ದಿವಾಣರಾದ ಉದಯಕುಮಾರ್ ಸರಳತ್ತಾಯ,ಚಪ್ಪರ ನಿರ್ಮಾಣದ ಉಸ್ತುವಾರಿಯನ್ನುವಹಿಸಿಕೊ೦ಡ ಎ೦.ರಾಜೇಶ್ ರಾವ್,ಯಾದವ ಆಚಾರ್ಯಕರ೦ಬಳ್ಳಿ ಉಪಸ್ಥಿತರಿದ್ದರು.