ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಷೇಕ್ ಅಂಬರೀಷ್ ದಂಪತಿ
ಮಡಿಕೇರಿ: ಸ್ಯಾಂಡಲ್ವುಡ್ ನಟ ಅಭಿಷೇಕ್ ಅಂಬರೀಷ್ ತಮ್ಮ ಪತ್ನಿ ಅವಿವಾ ಜೊತೆಗೆ ಕೊಡಗಿಗೆ ತೆರಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ್ದಾರೆ. ಕಾವೇರಿ ಉಗಮಸ್ಥಾನವಾದ ತಲಕಾವೇರಿಗೆ ಭೇಟಿ ನೀಡಿದ ನವ ದಂಪತಿ ದೇವರ ದರ್ಶನ ಪಡೆದಿದ್ದಾರೆ.
ಅಭಿಷೇಕ್ ಮತ್ತು ಅವಿವಾ ಭಾಗಮಂಡಲದಲ್ಲಿರುವ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ವಿಶೇಷ ಪೂಜೆ ನೆರವೇರಿದ್ದಾರೆ. ಪೂಜೆ ವೇಳೆ ಕಾವೇರಿ ನದಿ ಪಾತ್ರದಲ್ಲಿ ಮಳೆಯಾಗಿ ಕಾವೇರಿ ವಿವಾದ ಬಗೆಹರಿಯಲೆಂದು ಪ್ರಾರ್ಥಿಸಿದ್ದಾರೆ. ಮಳೆ ಬರಲಿ ಜೊತೆಗೆ ಕಾವೇರಿ ವಿವಾದ ಬಗೆಹರಿಯಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಅಂಬರೀಷ್ ಅವರು ಹೆಗಲಮೇಲೆ ಹಸಿರು ಟವೆಲ್ ಹಾಕಿದ್ದರು.
ಹಿರಿಯ ನಟಿ ಸುಮಲತಾ ಅಂಬರೀಷ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಗ ಮತ್ತು ಸೊಸೆ ತಲಕಾವೇರಿಗೆ ಭೇಟಿ ನೀಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಸಂಸದೆ ಸುಮಲತಾ ಅವರ ಪೋಸ್ಟ್ ಕಂಡು ಅನೇಕರು ಕಾಮೆಂಟ್ ಬರೆದಿದ್ದಾರೆ.