ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

5ನೇ ಟಿ-20 ಪಂದ್ಯ: ಭಾರತವನ್ನು 8 ವಿಕೆಟ್ ಗಳಿಂದ ಮಣಿಸಿದ ವೆಸ್ಟ್ ಇಂಡೀಸ್, 3-2 ಅಂತರದಿಂದ ಸರಣಿ ವಶ

ಫ್ಲೋರಿಡಾ: ಲಾಡರ್ಹಿಲ್ ನಲ್ಲಿ ಭಾನುವಾರ ರಾತ್ರಿ ನಡೆದ ಭಾರತ ವಿರುದ್ಧದ 5ನೇ ಟಿ-20 ಪಂದ್ಯದಲ್ಲಿ 8 ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ಗೆಲುವು ಸಾಧಿಸಿದೆ. ಈ ಮೂಲಕ 3-2 ಅಂತರದಲ್ಲಿ ವೆಸ್ಟ್ ಇಂಡೀಸ್ ಸರಣಿ ಗೆದ್ದುಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಬಹುಬೇಗನೆ ಯಶಸ್ವಿ ಜೈಸ್ವಾಲ್ ಮತ್ತು ಶುಭ್ ಮನ್ ಗಿಲ್ ಅವರ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಆರಂಭಿಕ ಆಘಾತಕ್ಕೆ ಒಳಗಾಯಿತು. ಜೈಸ್ವಾಲ್  ಕೇವಲ 5 ರನ್ ಗಳಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಶುಭ್ ಮನ್ ಗಿಲ್ 9 ರನ್ ಗಳಿಗೆ ಎಲ್ ಬಿಡಬ್ಲ್ಯೂ ಆದರು.

ನಂತರ ಬಂದ ಸೂರ್ಯ ಕುಮಾರ್ ಯಾದವ್ 61, ತಿಲಕ್ ವರ್ಮಾ 27, ಸಂಜು ಸ್ಯಾಮ್ಸನ್ 13 ರನ್ ಗಳಿಸಿ ಫೆವಿಲಿಯನ್ ಹಾದಿ ಹಿಡಿದರು. ನಂತರ ಬಂದ ನಾಯಕ ಹಾರ್ದಿಕ್ ಪಾಂಡ್ಯ ಕೂಡಾ ಕೇವಲ 14 ರನ್ ಗಳಿಸಿ  ಹೋಲ್ಡರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅಕ್ಸರ್ ಪಟೇಲ್ 13, ಅರ್ಶ್ ದೀಪ್ ಸಿಂಗ್ 8, ಮುಕೇಶ್ ಕುಮಾರ್ 4 ಗಳಿಸಿದರು. ಇದರಿಂದಾಗಿ ಭಾರತ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತ ನೀಡಿದ 166 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ ತಂಡದ ಪರ  ಬ್ರಾನ್ ಡಾನ್ ಕಿಂಗ್ ಅಜೇಯ 85, ನಿಕೋಲಸ್ ಫೋರನ್ 47, ಸಾಯ್ ಹೋಪ್ ಅಜೇಯ 22 ರನ್ ಗಳಿಸುವುದರೊಂದಿಗೆ ಇನ್ನೂ 12 ಎಸೆತ ಇರುವಂತೆಯೇ 8 ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 3-2 ಅಂತರದಿಂದ ಸರಣಿ ವಶಪಡಿಸಿಕೊಂಡಿತು.

No Comments

Leave A Comment