![](https://i0.wp.com/karavalikirana.com/wp-content/uploads/2023/08/Untitled-1-11.jpg?fit=455%2C320&ssl=1)
ದೇಶದಲ್ಲಿ ‘ಭಾರತ್ ಮಾತಾ’ ಎನ್ನುವುದೇ ಇತ್ತೀಚೆಗೆ ಅಸಂಸದೀಯ ಪದವಾಗಿದೆ: ರಾಹುಲ್ ಗಾಂಧಿ
ನವದೆಹಲಿ: ಸ್ಪಷ್ಟವಾಗಿ ಹೇಳಬೇಕೆಂದರೆ ಭಾರತದಲ್ಲಿ ಇಂದಿನ ದಿನಗಳಲ್ಲಿ ಭಾರತ್ ಮಾತಾ ಎನ್ನುವುದೇ ಅಸಂಸದೀಯ ಪದವಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಲೋಕಸಭೆಯಲ್ಲಿ ಎನ್ ಡಿಎ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯ ವೇಳೆ ರಾಹುಲ್ ಗಾಂಧಿ ಭಾಷಣವನ್ನು ಸ್ಪೀಕರ್ ಓಂಬಿರ್ಲಾ, ಭಾಗಶಃ ಕಡತದಿಂದ ಕಿತ್ತುಹಾಕಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ರಾಹುಲ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂಡಿಯಾ ವಿರೋಧ ಪಕ್ಷಗಳ ಕೂಟದ ಪರವಾಗಿ ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸುವ ಮುನ್ನ ಸಂಸತ್ತಿನಿಂದ ಹೊರನಡೆದ ರಾಹುಲ್, ಪ್ರಧಾನಿ ಭಾಷಣವಾಗುತ್ತಿದ್ದಾಗ ವಾಪಸ್ಸಾದರು.