ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಮಾಡಿದ್ದು ಒಂದೇ ಒಂದು ಕಾಲ್, ಹೋಗಿದ್ದು ಬರೊಬ್ಬರಿ 1.99 ಲಕ್ಷ: ಹಣ ಕಳೆದುಕೊಂಡ ಎಂಎಲ್ ಸಿ ಹೆಚ್. ವಿಶ್ವನಾಥ್ ಪುತ್ರ!
ಮೈಸೂರು: ಎಟಿಎಂಗೆ ಹೋಗಿದ್ದ ವೇಳೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರ ಪುತ್ರನಿಗೆ ಆನ್ಲೈನ್ ಮೂಲಕ ವಂಚಿಸಲಾಗಿದೆ.
ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ವಂಚನೆಗೊಳಗಾದವರು. ಆನ್‌ಲೈನ್ ವಂಚನೆಯ ಜಾಲಕ್ಕೆ ಓರ್ವ ಎಂಎಲ್‌ಸಿ ಎಚ್ ವಿಶ್ವನಾಥ್ ಪುತ್ರ ಅಮಿತ್ ಬಿದ್ದು, ಬರೊಬ್ಬರಿ 1.99 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಬಳಿಕ ಘಟನೆ ಹಿನ್ನಲೆ ಕೂಡಲೇ ಸೈಬರ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ.
ಹಣ ಡ್ರಾ ಮಾಡಲು ಅಮಿತ್ ದೇವರಹಟ್ಟಿ ಎಟಿಎಂಗೆ ಹೋಗಿದ್ದು, ಹಣ ಬಾರದ ಕಾರಣ ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿದ್ದಾರೆ. ಗೂಗಲ್ ನಲ್ಲಿ ನಂಬರ್ ಹುಡುಕಿ ಅಮಿತ್ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ವಂಚಿಸಿದ್ದಾನೆ. ಅಮಿತ್ ಅವರ ಬ್ಯಾಂಕ್ ಖಾತೆಯ ವಿವರ ಪಡೆದು ವಂಚಿಸಿದ್ದಾನೆ. ಈ ಬಗ್ಗೆ ಅಮಿತ್ ದೇವರಹಟ್ಟಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಆನ್ಲೈನ್ ವಂಚನೆ(Online Fraud) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎಷ್ಟೇ ವಂಚನೆ ಪ್ರಕರಣಗಳು ಬೆಳಕಿಗೆ ಬಂದರೂ, ಜನಸಾಮಾನ್ಯರು ಮಾತ್ರ ಇಂತಹವರ ಬಲೆಗೆ ಬೀಳುವುದು ಮಾತ್ರ ತಪ್ಪುತ್ತಿಲ್ಲ. ಮುಖ್ಯವಾಗಿ ಶಿಕ್ಷಣವಂತರೇ ಇಂತಹವರ ಗಾಳಕ್ಕೆ ಬಿದ್ದು, ಹಣ ಕಳೆದುಕೊಳ್ಳುತ್ತಿರುವುದು ದುರಾದೃಷ್ಟ.