ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಇಸ್ರೋ: ಸಿಂಗಾಪುರದ 7 ಉಪಗ್ರಹಗಳ ಹೊತ್ತು ಯಶಸ್ವಿಯಾಗಿ ಉಡಾವಣೆಯಾದ ಪಿಎಸ್​ಎಲ್​ವಿ-ಸಿ56

ಶ್ರೀಹರಿಕೋಟಾ: 7 ವಿದೇಶಿ ಉಪಗ್ರಹಗಳನ್ನು ಹೊತ್ತು ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಪಿಎಸ್​ಎಲ್​ವಿ-ಸಿ56 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದೆ.

ಚಂದ್ರಯಾನ-3 ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಮತ್ತೊಂದು ರಾಕೆಟ್​ ಉಡಾವಣೆ ಮಾಡಿದ್ದು, ಸಿಂಗಾಪೂರದ ಉಪಗ್ರಹಗಳನ್ನು ಹೊತ್ತ ಪಿಎಸ್​ಎಲ್​ವಿ-ಸಿ56 ರಾಕೆಟ್​ ಅನ್ನು​ ಇಂದು ಬೆಳಗ್ಗೆ 6.30ಕ್ಕೆ ಆಂಧ್ರ ಪ್ರದೇಶದದ ಶ್ರೀಹರಿಕೋಟಾದಲ್ಲಿರುವ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರ (ಎಸ್​ಡಿಎಸ್​ಸಿ) ದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಇಂದು ಬೆಳಗ್ಗೆ 6.30ಕ್ಕೆ ಪಿಎಸ್ ಎಲ್ ವಿ ರಾಕೆಟ್ ಉಡಾವಣೆಯಾಗಿದ್ದು, ಎಲ್ಲ ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ. ಎಲ್ಲಾ ಉಪಗ್ರಹಗಳನ್ನು 5 ಕಕ್ಷೆಯ ಇಳಿಜಾರಿನೊಂದಿಗೆ 535 ಕಿಮೀ ವೃತ್ತಾಕಾರಕ್ಕೆ ಸೇರಿಸಲಾಗುತ್ತದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.

ಇದು ಇಸ್ರೋದ 56ನೇ ಕಾರ್ಯಾಚರಣೆಯಾಗಿದ್ದು, ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ ಎಲ್ ವಿ) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸದ್ಯ ಉಡಾವಣೆ ಮಾಡಲಾಗಿರುವ ರಾಕೆಟ್​ನ ಮೇಲಿನ ಹಂತವನ್ನು ಕಡಿಮೆ ಕಕ್ಷೆಯಲ್ಲಿ ಇರಿಸಿ, ಅದರಲ್ಲಿರುವ ಉಪಗ್ರಹಗಳನ್ನು ಸ್ಥಾಪಿಸಲಾಗುತ್ತದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ, ‘PSLV-C56 ರಾಕೆಟ್​ ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಮೊದಲ ಉಡಾವಣಾ ಪ್ಯಾಡ್ (FLP) ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. PSLV-C56 / DS-SAR ಎಂಬುದು ಸಿಂಗಾಪುರದ ST ಇಂಜಿನಿಯರಿಂಗ್‌ಗಾಗಿ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನ (NSIL) ಮೀಸಲಾದ ಕಮರ್ಷಿಯಲ್​ ಮಿಷನ್ ಆಗಿದೆ. ಈ DS-SAR ರಾಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಉಪಗ್ರಹವು, ಈ ಮಿಷನ್​ನ ಪ್ರಾಥಮಿಕ ಉಪಗ್ರಹವಾಗಿದ್ದು, ಇದು ಎರಡು ಆಯಾಮದ ಚಿತ್ರಗಳನ್ನು ಅಥವಾ ವಸ್ತುಗಳ ಮೂರು ಆಯಾಮದ ಪುನರ್ ನಿರ್ಮಾಣಗಳನ್ನು ರಚಿಸುವ ಸಿಂಥೆಟಿಕ್​ ಅಪರ್ಚರ್​ ರಾಡಾರ್ ಹೊಂದಿದೆ.

ಇದು ಸೇರಿದಂತೆ ಸಿಂಗಾಪುರಕ್ಕೆ ಸಂಬಂಧಿಸಿದ 7 ಉಗ್ರಹಗಳನ್ನು ಸಹ PSLV-C56 ರಾಕೆಟ್​ ಹೊತ್ತೊಯ್ದಿದೆ. DS-SAR ಉಪಗ್ರಹವನ್ನು DSTA (ಸಿಂಗಾಪೂರ್ ಸರ್ಕಾರವನ್ನು ಪ್ರತಿನಿಧಿಸುತ್ತದೆ) ಮತ್ತು ST ಇಂಜಿನಿಯರಿಂಗ್ ನಡುವಿನ ಪಾಲುದಾರಿಕೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಉಪಗ್ರಹವು ಸ್ಥಾಪನೆಯಾಗಿ ಕಾರ್ಯಾಚರಣೆ ಆರಂಭಿಸಿದ ನಂತರ ಸಿಂಗಾಪುರ ಸರ್ಕಾರದ ವಿವಿಧ ಏಜೆನ್ಸಿಗಳು ಉಪಗ್ರಹ ಚಿತ್ರಣಗಳನ್ನು ಬಳಸಿಕೊಳ್ಳಲಿವೆ ಎಂದು ಹೇಳಲಾಗಿದೆ.

ST ಇಂಜಿನಿಯರಿಂಗ್ ಕಂಪನಿಯು ತಮ್ಮ ವಾಣಿಜ್ಯ ಗ್ರಾಹಕರಿಗೆ ಬಹು-ಮಾದರಿ ಮತ್ತು ಹೆಚ್ಚಿನ ಪ್ರತಿಕ್ರಿಯೆ ಚಿತ್ರಣ ಮತ್ತು ಜಿಯೋಸ್ಪೇಷಿಯಲ್ ಸೇವೆಗಳಿಗಾಗಿ ಇದನ್ನು ಬಳಸುತ್ತದೆ. DS-SAR ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (IAI) ಅಭಿವೃದ್ಧಿಪಡಿಸಿದ ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ಪೇಲೋಡ್ ಅನ್ನು ಹೊಂದಿದೆ.

No Comments

Leave A Comment