ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಯಶ್ಪಾಲ್ ಸುವರ್ಣರೇ ಖುಷ್ಬೂ ಸುಂದರ್ ತನಿಖೆಯಲ್ಲಿ ನಂಬಿಕೆ ಇಲ್ಲದಿದ್ದರೆ ಕಲ್ಲಡ್ಕ ಪ್ರಭಾಕರ ಭಟ್ ಕರೆಸಿ ತನಿಖೆ ಮಾಡಿಸಿ : ನಗರದಲ್ಲಿ ರಮೇಶ್ ಕಾಂಚನ್ ಕಿಡಿ.
ಉಡುಪಿ: ನಗರದ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎನ್ನಲಾದ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಅವರು ತನಿಖೆ ಮಾಡಿದ್ದಾರೆ.
ಮಿಸ್ಟರ್ ಯಶ್ ಪಾಲ್ ಸುವರ್ಣರವರೇ ನಿಮಗೆ ಖುಷ್ಬು ಸುಂದರ್ ಮೇಲೆ ನಂಬಿಕೆ ಇಲ್ಲದಿದ್ದರೆ, ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಕರೆಸಿ ತನಿಖೆ ಮಾಡಿಸಿ ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ವಾಗ್ದಾಳಿ ನಡೆಸಿದರು.
ಮಣಿಪುರ ಘಟನೆ ಖಂಡಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಅಜ್ಜರಕಾಡಿನಲ್ಲಿ ಹಮ್ಮಿಕೊಂಡ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಯಶ್ ಪಾಲ್ ಅವರೇ ನೀವು ಶಾಸಕರು ಎಂಬುವುದು ನಿಮ್ಮ ತಲೆಯಲ್ಲಿ ಇರಲಿ. ಉಡುಪಿ ವಿಧಾನಸಭಾ ಕ್ಷೇತ್ರದ ಜನರು ಉಡುಪಿಯ ಸಮಗ್ರ ಅಭಿವೃದ್ಧಿಗಾಗಿ ನಿಮ್ಮನ್ನು ವಿಧಾನಸಭೆಗೆ ಕಳುಹಿಸಿದ್ದಾರೆ.
ಅದು ಬಿಟ್ಟು ಪುಂಡಪೋಕ್ರಿಯ ಹಾಗೆ ವೈಯಕ್ತಿಕ ವರ್ಚಸ್ಸನ್ನು ಬಲಪಡಿಸಲು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ. ಉಡುಪಿಯಲ್ಲಿ ಅನೇಕ ಕೆಲಸಕಾರ್ಯ ಆಗಬೇಕಿದೆ. ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ನಿಮ್ಮ ಶೋಭಾಕ್ಕನ ಮುತಾಂತರ ಕೆಲಸ ಮಾಡಿ ತೋರಿಸಿ ಎಂದು ಸವಾಲು ಹಾಕಿದರು.